ನಕಲಿ ಅಂಕಪಟ್ಟಿ ಜಾಲ: ನಾಲ್ವರ ಬಂಧನ !


28-09-2017 1196

ಬೆಳಗಾವಿ: ನಕಲಿ ಅಂಕಪಟ್ಟಿ ತಯಾರಿಸುವ ಜಾಲದಲ್ಲಿ ತೊಡಗಿದ್ದ, ನಾಲ್ವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಸೆ. 20ರಂದು ಗದಗ ಜಿಲ್ಲೆಯ ಅಮರಗೋಳದ 21 ವರ್ಷದ ಶರಣಯ್ಯ ಚನ್ನಯ್ಯ ‌ಹಿರೇಮಠರನ್ನು ಬಂಧಿಸಲಾಗಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅವರು ನೀಡಿದ ಮಾಹಿತಿ ಆಧಾರದ ಮೇಲೆ ಗದಗ ಜಿಲ್ಲೆಯ ರೋಣದ ನ್ಯಾಯಾಲಯದಲ್ಲಿ ಎಸ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿರುವ, ಅಮರಗೋಳದ ನಿವಾಸಿ ಅಂದಯ್ಯ ಗವಿಸಿದ್ದಯ್ಯ‌ ಹಿರೇಮಠ, ಚಿತ್ರದುರ್ಗ ‌ಜಿಲ್ಲಾ ನ್ಯಾಯಾಲಯದಲ್ಲಿ ಅಟೆಂಡರ್ ಆಗಿರುವ ದಾವಣಗೆರೆಯ ನಿಟುವಳ್ಳಿ ಆಂಜನೇಯ ಬಡಾವಣೆಯ ರತ್ನಮ್ಮ ಕೆ.ಎಂ. ಹಾಗೂ ದಾವಣಗೆರೆ ಸಮೀಪದ ತೊಳಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎನ್. ಉಮಾನಾಯ್ಕರನ್ನು ಪೊಲೀಸರು ಬಂಧಿಸಿದ್ದಾರೆ.

 


ಒಂದು ಕಮೆಂಟನ್ನು ಬಿಡಿ