ಅಪ್ರಾಪ್ತ ಬಾಲಕ-ಬಾಲಕಿಯರಿಗೆ ದಂಡ !


27-09-2017 1155

ಬೆಂಗಳೂರು: ವಾಹನ ಚಲಾಯಿಸುವ ಅಪ್ರಾಪ್ತರ ವಿರುದ್ದ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು 650 ಮಂದಿ ಅಪ್ರಾಪ್ತ ಬಾಲಕ-ಬಾಲಕಿಯರನ್ನು ಪತ್ತೆಹಚ್ಚಿ ದಂಡ ವಿಧಿಸಿ ಅವರ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಗರದ ಪಶ್ಚಿಮ, ಪೂರ್ವ, ಉತ್ತರ, ವಿಭಾಗದ ಸಂಚಾರ ಪೊಲೀಸರು ನಿನ್ನೆ ಆರ್.ಟಿ.ನಗರ, ಹುಳಿಮಾವು, ಕಬ್ಬನ್ ಪಾರ್ಕ್, ಹಲಸೂರು ಗೇಟ್ ಸೇರಿದಂತೆ ಇತರೆಡೆ ಕಾರ್ಯಾಚರಣೆ ನಡೆಸಿದ್ದು, ಸುಮಾರು 650 ಕ್ಕೂ ಹೆಚ್ಚು ಬೈಕ್ ಓಡಿಸುತ್ತಿದ್ದ ಅಪ್ರಾಪ್ತ ವಯಸ್ಕರನ್ನು ಪತ್ತೆಹಚ್ಚಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬೈಕ್, ಸ್ಕೂಟರ್,ಕಾರು ಇನ್ನಿತರ ವಾಹನಗಳನ್ನು ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕ-ಬಾಲಕಿಯರನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಲ್ಲದೆ, ಅವುಗಳ ಮಾಲೀಕರ ಹಾಗೂ ಅಪ್ರಾಪ್ತರ ತಂದೆಯ ಚಾಲನಾ ಪರವಾನಗಿ ತರಿಸಿಕೊಂಡು ಅಮಾನತ್ತಿನಲ್ಲಿರಿಸಿ ಆರ್.ಟಿ.ಒ ಕಚೇರಿಗೆ ದಾಖಲೆಗಳನ್ನು ರವಾನಿಸಿ, ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ