ಆರ್.ಬಿ.ಐ ಗೆ ಎಚ್ಚರಿಕೆ !


25-09-2017 634

ಬೆಂಗಳೂರು: ಬ್ಯಾಂಕ್ ಗ್ರಾಹಕರ ದತ್ತಾಂಶಕ್ಕೆ ಕನ್ನ ಹಾಕುವ ಸ್ಕಿಮರ್ ಯಂತ್ರದ ಜಾಲ ಪತ್ತೆಯಾಗಿರುವ ಬೆನ್ನಲ್ಲೆ, ಬ್ಯಾಂಕ್‍ ನಲ್ಲಿ ಇಟ್ಟ ಹಣ ಸುರಕ್ಷಿತೆಯ ಬಗ್ಗೆ ಸೈಬರ್ ಸೆಕ್ಯೂರಿಟಿಯಿಂದ ರಿಸರ್ವ್ ಬ್ಯಾಂಕ್(ಆರ್‍ಬಿಐ)ಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.

ಎಟಿಎಂ ಘಟಕಗಳಿಗೆ ದತ್ತಾಂಶಗಳನ್ನು ಕದಿಯುವ ಸ್ಕಿಮರ್ ಆಳವಡಿಸಿ ಹಣ ದೋಚುವ ಇಬ್ಬರು ವಿದೇಶಿ ಖದೀಮರನ್ನು ಪೊಲೀಸರು ಹಿಡಿದ ಬೆನ್ನಲ್ಲೆ,  ಬ್ಯಾಂಕ್‍ ನ ಇಂಟರ್ನೆಟ್ ಗೆ ಕನ್ನ ಹಾಕುವ ಜಾಲ ಕಾರ್ಯಾಚರಣೆ ನಡೆಸುತ್ತಿರುವುದು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬ್ಯಾಂಕುಗಳಲ್ಲಿರುವ ಗ್ರಾಹಕರ ಖಾತೆಯ ಮಾಹಿತಿ ತಿಳಿದುಕೊಂಡು ಕನ್ನ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸೈಬರ್ ಸಂಸ್ಥೆಯ ಸಹಾಯ ಯಾಚಿಸಿವೆ. ಬ್ಯಾಂಕುಗಳಿಂದಲೇ ಅಂತರಿಕ ಮಾಹಿತಿ ಸೋರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬ್ಯಾಂಕ್ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಅವರಿಗೆ ಪೆನ್‍ ಡ್ರೈವ್ ಅಥವಾ ಯಾವುದಾದರೂ ಸಿಡಿಯನ್ನು ನೀಡಲಾಗುತ್ತದೆ. ಇದನ್ನು ಬ್ಯಾಂಕ್ ಸಿಬ್ಬಂದಿಗಳು ಕಚೇರಿಯ ಕಂಪ್ಯೂಟರ್ ಗೆ ಹಾಕಿದ ತಕ್ಷಣ ವೈರಸ್ ಆಟ್ಯಾಕ್ ಆಗಿ ಮಾಹಿತಿ ಲೀಕ್ ಆಗುತ್ತದೆ.

ಇತ್ತೀಚೆಗೆ ಬ್ಯಾಂಕ್ ಸಿಬ್ಬಂದಿಗಳ ಇ-ಮೇಲ್‍ ಗಳಿಗೆ ವೈರಸ್ ಇರುವ ಲಿಂಕ್‍ ಗಳನ್ನು ಕಳಿಸಲಾಗುತ್ತಿದೆ. ಈ ಲಿಂಕ್‍ ಗಳನ್ನು ಕಚೇರಿ ಕಂಪ್ಯೂಟರ್‍ ನಲ್ಲಿ ಒಪನ್ ಮಾಡಿದರೆ ಅಕೌಂಟ್ ಡೀಟೈಲ್ಸ್ ಕಳ್ಳರ ಪಾಲಾಗುತ್ತದೆ. ಇದರಿಂದ ಅದೆಷ್ಟೋ ಜನರ ದುಡ್ಡು ಸದ್ದಿಲ್ಲದೆ ಅಕೌಂಟ್‍ನಿಂದ ಮಾಯವಾಗಿದೆ.

ಇದಕ್ಕಾಗಿ ಸೈಬರ್ ಸೆಕ್ಯೂರಿಟಿ ಸಂಸ್ಥೆಯವರು ಆರ್.ಬಿ.ಐ ಗೆ ಪತ್ರ ಬರೆದಿದ್ದು, ತಕ್ಷಣವೇ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಿತಿಯೊಂದನ್ನು ರಚಿಸಿ, ಎಟಿಎಂಗೆ ವಿಸಿಟ್ ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸೂಚನೆ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ