ಸಮಾವೇಶಕ್ಕೆ ಬರದಿದ್ದರೆ ರೇಷನ್ ಸಿಗಲ್ಲ..?


22-09-2017 923

ಕೊಪ್ಪಳ: ಕೊಪ್ಪಳದಲ್ಲಿಂದು ನಡೆಯುವ ಫಲಾನುಭವಿಗಳ ಬೃಹತ್ ಸಮಾವೇಶಕ್ಕೆ ಜನರನ್ನು ಕರೆತರಲು ಕೈ ಪಾಳೆಯ ಕಸರತ್ತು ನಡೆಸಿದೆ. ಸಮಾವೇಶಕ್ಕೆ ಬಾರದಿದ್ದರೆ, ರೇಷನ್ ಸ್ಥಗಿತವಾಗುತ್ತೆ, ಸಾಲ ರಿನಿವಲ್ ಆಗಲ್ಲ ಎಂಬ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು, ಈ ರೀತಿ ಜನರಿಗೆ ಬೆದರಿಕೆ ಹಾಕಿದ್ದು, ತಹಶೀಲ್ದಾರರಿಗೆ, ಶಾಸಕರು ಜವಬ್ದಾರಿ ವಹಿಸಿದ್ದಾರೆ. ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಸಮಾವೇಶಕ್ಕೆ ಜನರನ್ನು ಕರೆತರುವಂತೆ, ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಇದಾಗಿದ್ದು, ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಈ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಭವನದ ಬಳಿಯ ಬೃಹತ್ ವೇದಿಕೆಯಲ್ಲಿ ನಡೆಯುವ ಸಮಾವೇಶಕ್ಕೆ ಸಂಪುಟದ ಅರ್ಧಕ್ಕಿಂತಲೂ ಹೆಚ್ಚು ಸಚಿವರು ಭಾಗಿಯಾಗಲಿದ್ದು, ಒಂದು ಲಕ್ಷ ಜನರು ಸೇರಲಿದ್ದರೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಸಮಾವೇಶಕ್ಕೆ ಜನರನ್ನು ಈ ರೀತಿ ಹೆದರಿಸಿ ಕರೆತರುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ