ಶೀಘ್ರದಲ್ಲೇ ಬಳ್ಳಾರಿ-ಬೆಂಗಳೂರು ವಿಮಾನ !


21-09-2017 1195

ಬಳ್ಳಾರಿ: ಗಣಿನಾಡಿನಿಂದ ಮುತ್ತಿನ ನಗರಿ ಹೈದರಾಬಾದ್‍ ಗೆ ಉಡಾನ್ ಯೋಜನೆಯಡಿ ಕಡಿಮೆ ದರದಲ್ಲಿ ವಿಮಾನಯಾನ ಇಂದಿನಿಂದ ಆರಂಭಗೊಂಡಿದೆ. ಟ್ರೂಜೆಟ್ ಸಂಸ್ಥೆ ವಿಮಾನದ ಹಾರಾಟದ ವ್ಯವಸ್ಥೆ ಮಾಡಿದೆ.  ಜಿಲ್ಲೆಯ ಸಂಡೂರು ತಾಲ್ಲೂಕಿನ ಜಿಂದಾಲ್ ವಿಮಾನ ನಿಲ್ದಾಣದಿಂದ ಪ್ರತಿ ನಿತ್ಯ 70 ಆಸನಗಳ ಈ ವಿಮಾನ ಹೈದರಾಬಾದ್‍ ನಿಂದ ಬೆಳಿಗ್ಗೆ 6.20 ಕ್ಕೆ ಬಿಟ್ಟು ಬಳ್ಳಾರಿ ಜಿಂದಾಲ್ ವಿಮಾನ ನಿಲ್ದಾಣಕ್ಕೆ 7.25 ಕ್ಕೆ ಬರಲಿದೆ. ಪುನಃ ಇಲ್ಲಿಂದ 7.55 ಕ್ಕೆ ಹೊರಟು 9 ಗಂಟೆಗೆ ಹೈದರಾಬಾದ್ ತಲುಪಲಿದೆ. ಪ್ರಯಾಣ ದರ 999 ರಿಂದ 2500 ರೂಪಾಯಿವರೆಗೆ ಇದೆ. ಇಂದು ಈ ಯಾನಕ್ಕೆ ಕೇಂದ್ರ ವಿಮಾನ ಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಚಾಲನೆ ನೀಡಿದರು.

ಈ ಸಂದರ್ಭದಲ್ಲು ಮಾತನಾಡಿದ ಸಚಿವ ಸಿನ್ಹಾ ಮುಂದಿನ ತಿಂಗಳು ರಾಜಧಾನಿ ಬೆಂಗಳೂರಿಗೆ ನಂತರದ ದಿನಗಳಲ್ಲಿ ಮುಂಬೈಗೆ ಸಹ ಇಲ್ಲಿಂದ ವಿಮಾನಗಳ ಹಾರಾಟ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದರು. ಸಂಸದ ಶ್ರೀರಾಮುಲು, ಸಚಿವರಾದ ಸಂತೋಷ್ ಲಾಡ್, ಶಾಸಕ ಆನಂದ್ ಸಿಂಗ್  ಕೆ.ಸಿ.ಕೊಂಡಯ್ಯ ಮತ್ತು ಸಂಜ್ಜನ್ ಜಿಂದಾಲ್ ಈ ವೇಳೆ ಉಪಸ್ಥಿತರಿದ್ದರು.


ಒಂದು ಕಮೆಂಟನ್ನು ಬಿಡಿ