ಕೇಸರಿ ಬಾವುಟಕ್ಕೆ ಬೆಂಕಿ: ಆತಂಕ ಸೃಷ್ಟಿ !


14-09-2017 1156

ಚಾಮರಾಜನಗರ: ಕೇಸರಿ ಬಾವುಟಕ್ಕೆ ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿರುವ ಘಟನೆಯು, ಚಾಮರಾಜ ನಗರದಲ್ಲಿ  ನಡೆದಿದೆ. ಜಿಲ್ಲೆಯ ಗಾಳೀಪುರ ಬಡಾವಣೆಯಲ್ಲಿ ತಡರಾತ್ರಿ‌, ರಂಗಸ್ವಾಮಿ ಎಂಬುವವರಿಗೆ ಸೇರಿದ ಸ್ಟಾರ್ ಸಿಟಿ ದ್ವಿಚಕ್ರ ವಾಹನದ‌ ಮೇಲಿಟ್ಟು ಬಾವುಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ರಾತ್ರಿ 12 ಗಂಟೆಯ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗಣೇಶನ ದೇವಸ್ಥಾನದ ಮೇಲಿದ್ದ ಕೇಸರಿ ಬಾವುಟವನ್ನು ಸುಟ್ಟು ಹೋಗಿದ್ದಾರೆಂದು ಸ್ಥಳೀಯ ಮಾಹಿತಿ ನೀಡಿದ್ದಾರೆ. ಈ ಕುರಿತು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮತ್ತು ಮುಂಜಾಗ್ರತಾ ಕ್ರಮವಾಗಿ ಗಾಳೀಪುರದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.


ಒಂದು ಕಮೆಂಟನ್ನು ಬಿಡಿ