ಅಧ್ಯಕ್ಷ ಸ್ಥಾನಕ್ಕಾಗಿ ಭುಗಿಲೆದ್ದ ಭಿನ್ನಮತ !


11-09-2017 487

ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕಾಗಿ ಚಿತ್ರದುರ್ಗ ಕಾಂಗ್ರೆಸ್ ನಲ್ಲಿ ಭಿನ್ನಮತ ಬುಗಿಲೆದ್ದಿದೆ. ಅಧ್ಯಕ್ಷ ಪಟ್ಟಕ್ಕಾಗಿ ಕಿತ್ತಾಟ ಶುರುವಾಗಿದ್ದು,  ಹಾಲಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರನ್ನು ಅಧಿಕಾರಿಗಳ ಸಭೆಗೆ ಬಿಡದೆ, ಹಾಲಿ ಜಿಲ್ಲಾಪಂಚಾಯತಿ ಸದಸ್ಯರು ಅಡ್ಡಗಟ್ಟಿದ್ದಾರೆ. ಸೌಭಾಗ್ಯ ಬಸವರಾಜನ್ ಅವರನ್ನು ಒಳ ಬಿಡದೆ ತಡೆದಿರುವ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿಶಾಲಾಕ್ಷಿ ನಟರಾಜ್ , ಶಶಿಕಲಾ ಸುರೇಶ್ ಬಾಬು, ಒಪ್ಪಂದದ ಪ್ರಕಾರ ಅಧ್ಯಕ್ಷ ಸ್ಥಾನ ಬಿಟ್ಟು ಕೊಡದೇ ಇರೋದಕ್ಕೆ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಬೆಂಬಲಿಗರಿಂದ ಸಭೆಗೆ ಒಳ ಬಿಡದೇ ತಡೆದು ನಿಲ್ಲಿಸಿರುವುದಾಗಿ ತಿಳಿದು ಬಂದಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಪೊಲೀಸರು ಹಾಗೂ ಹಾಲಿ ಸದಸ್ಯರು ಹಾಗೂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೇ ಪೊಲೀಸರು ಹಾಗೂ ಬೆಂಬಲಿಗರ ಮಧ್ಯ ನೂಕಾಟ ತಳ್ಳಾಟವೂ ನಡೆದಿದೆ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಹಾಲಿ ಸದಸ್ಯರಾ ಶಶಿಕಲಾ ಹಾಗೂ ವಿಶಾಲಾಕ್ಷಮ್ಮ, ಸೌಭಾಗ್ಯ ಬಸವರಾಜನ್ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆಗೆ ಮುಂದಾದರು. ನಂತರದಲ್ಲಿ ಪೊಲೀಸರು ಪರಿಸ್ಥತಿ ನಿಯಂತ್ರಣಕ್ಕೆ ತಂದರು.


ಒಂದು ಕಮೆಂಟನ್ನು ಬಿಡಿ