ಬೈಕ್ ರ‍್ಯಾಲಿಯನ್ನು ತಡೆದ ಖಾಕಿ ಪಡೆ !


06-09-2017 232

ಹಾಸನ: ಮಂಗಳೂರು ಚಲೋ ಹಿನ್ನೆಲೆಯಲ್ಲಿ ಹಾಸನದಲ್ಲೂ ಬಿಜೆಪಿ ಬೈಕ್ ರ‍್ಯಾಲಿ ನಿರತ, ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನದಲ್ಲಿ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿ ಹೊರಟಿದ್ದರು, ಈ ವೇಳೆ ಹೇಮಾವತಿ ಪ್ರತಿಮೆ ಬಳಿಯೇ ರ‍್ಯಾಲಿಯನ್ನು, ಖಾಕಿ ಪಡೆ ತಡೆದಿದ್ದಾರೆ. ಇದರಿಂದ ರಾಜ್ಯ ಸರಕಾರದ ವಿರುದ್ಧ ಕಮಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಸಂಘಟನೆ ಕಾರ್ಯಕರ್ತರ ಜೊತೆಗೆ ಪ್ರಗತಿಪರರ ಹತ್ಯೆಯು ನಡೆಯುತ್ತಿದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲ ಎಂದು ಘೋಷಣೆ ಕೂಗಿದರು.

ಇನ್ನು ಚಿಕ್ಕಮಗಳೂರಿನಲ್ಲಿಯೂ, ಕಡೂರಿನಿಂದ ಮಂಗಳೂರಿಗೆ ಹೊರಟ ಬಿಜೆಪಿ ಬೈಕ್ ರ‍್ಯಾಲಿಯನ್ನು ಪೊಲೀಸರು ತಡೆದರು. ಕಡೂರಿನ ಬಿಜೆಪಿ ಅಧ್ಯಕ್ಷ ಬೆಳ್ಳಿಪ್ರಕಾಶ್ ನೇತ್ರತ್ವದಲ್ಲಿ ನಡೆದ ಬೈಕ್ ರ‍್ಯಾಲಿಯಲ್ಲಿ, 250 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ರ‍್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ತದನಂತರ ಬಿಡುಗಡೆಗೊಳಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಹಾಸನ ಬೈಕ್ ರ‍್ಯಾಲಿ ತಡೆದ ಖಾಕಿ ಪಡೆ !