ಗೌರಿ ಲಂಕೇಶ್ ಹತ್ಯೆ ಅಮಾನುಷ.. !


06-09-2017 978

ಧಾರವಾಡ: ಗೌರಿ ಲಂಕೇಶ್ ಹತ್ಯೆ ಅಮಾನುಷವಾದದ್ದು ಎಂದು, ಹಿರಿಯ ಸಾಹಿತಿ ಚನ್ನವೀರ ಕಣವಿ ಹೇಳಿದ್ದಾರೆ. ಧಾರವಾಡದಲ್ಲಿಂದು ಮಾತನಾಡಿದ ಅವರು, ಗೌರಿ ಲಂಕೇಶ್ ಕೋಮುವಾದ, ಮೌಢ್ಯವನ್ನು ವಿರೋಧಿಸಿ ವೈಚಾರಿಕ ಲೇಖನ ಬರೆಯುತ್ತಿದ್ದರು, ಕ್ರಿಯಾಶೀಲವಾಗಿ ಎಲ್ಲ ಅನ್ಯಾಯದ ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು, ಇದು ವಿಚಾರವಾದಿಗಳಿಗೆಲ್ಲಾ ಆಘಾತಕಾರಿ ಸುದ್ದಿ ಎಂದರು. ಎಂ.ಎಂ ಕಲಬುರ್ಗಿ ಹತ್ಯೆ ನಡೆದು ಎರಡು ವರ್ಷಗಳಾದರೂ, ಹಂತಕರನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಮೂರು ತಂಡಗಳಲ್ಲಿ ಪೊಲೀಸ್ ಇಲಾಖೆ ತನಿಖೆಗೆ ಸೂಚಿಸಿರುವುದು ಸ್ವಾಗತಾರ್ಹ ಎಂದರು.


ಒಂದು ಕಮೆಂಟನ್ನು ಬಿಡಿ