ಮನೆ ಬೀಗ ಮುರಿದು ಚಿನ್ನಾಭರಣ ಲೂಟಿ !


04-09-2017 544

ಬೆಂಗಳೂರು: ಬಿಡದಿಯಲ್ಲಿ ನಡೆಸುತ್ತಿದ್ದ ಕಾರ್ಖಾನೆಯೊಂದರ ಮಾಲೀಕರೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 150 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ ಸೇರಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ಸೋಲದೇವನಹಳ್ಳಿಯ ಅತಿಥೇಯ ಗೆಳೆಯರ ಬಳಗ (ಎಜಿಬಿ) ಬಡಾವಣೆಯಲ್ಲಿ ಶ್ರೀಕಂಠ ಅವರು, ಕಳೆದ ಶನಿವಾರ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರನಾಡಿಗೆ ಹೋಗಿದ್ದು ಪ್ರವಾಸ ಮುಗಿಸಿಕೊಂಡು ಇಂದು ಮುಂಜಾನೆ ವಾಪಸ್ ಬಂದು ನೋಡಿದಾಗ ಮನೆ ಬಾಗಿಲ ಬೀಗ ಮುರಿದಿರುವುದು ಕಂಡುಬಂದಿದೆ. ಒಳ ಹೋಗಿ ನೋಡಿದಾದ ದುಷ್ಕರ್ಮಿಗಳು ಬೀಗ ಮುರಿದು ಒಳನುಗ್ಗಿ ಮನೆಯಲ್ಲಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬೀರುವಿನಲ್ಲಿದ್ದ ಚಿನ್ನಾಭರಣಗಳು, 2 ಕೆಜಿ ಬೆಳ್ಳಿಯ ಸಾಮಾನುಗಳನ್ನು ದೋಚಿ ಪರಾರಿಯಾಗಿದ್ದರು. ಶ್ರೀಕಂಠ ಅವರು ಬಿಡದಿ ಬಳಿ ಕಾರ್ಖಾನೆಯೊಂದನ್ನು ನಡೆಸುತ್ತಿದ್ದು, ನಗದನ್ನು ಫ್ಯಾಕ್ಟರಿಯಲ್ಲೇ ಬಿಟ್ಟಿದ್ದು ಅದು ಕಳ್ಳತನವಾಗಿಲ್ಲ. ಪ್ರಕರಣ ದಾಖಲಿಸಿರುವ ಸೋಲದೇವನಹಳ್ಳಿ ಪೊಲೀಸರು, ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.

 


ಒಂದು ಕಮೆಂಟನ್ನು ಬಿಡಿ