ಬಾರ್ ಬಂದ್ ಮಾಡಿ: ಸಾರ್ವಜನಿಕರ ಒತ್ತಾಯ


01-09-2017 1322

ಮೈಸೂರು: ಬಾರ್ ಬಂದ್ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನ ಯರಗನಹಳ್ಳಿಯ ಟೆರಿಷಿಯನ್ ಕಾಲೇಜು ಬಳಿಯಿರುವ ಬಾರ್ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿದ ಸಾರ್ವಜನಿಕರು, ಕೂಡಲೆ ಮದ್ಯದಂಗಡಿ ಬಂದ್ ಮಾಡುವಂತೆ ಒತ್ತಾಯಿಸಿದರು. ಈ ಕುರಿತಂತೆ ಕಳೆದ ರಾತ್ರಿ ಬಾರ್ ನ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ಗಲಾಟೆ ನಡೆದು, ಘರ್ಷಣೆ ಏರ್ಪಟ್ಟಿತ್ತು. ಹೀಗಾಗಿ  ಇಂದು ಬಾರ್ ಮುಂದೆಯೇ ಕುಳಿತು ಯರಗನಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಮಹಿಳೆಯರು ಸೇರಿದಂತೆ ನೂರಾರು ಮಂದಿ ಬಾರ್ ಮುಂದೆ ಜಮಾವಣೆಯಾಗಿದ್ದು, ಟೆರೆಷಿಯನ್ ಕಾಲೇಜು ಬಳಿ ಇರುವ ಮೂರ್ನಾಲ್ಕು ಬಾರ್ ಗಳನ್ನ ಮುಚ್ಚುವಂತೆ ಆಗ್ರಹಿಸಿದರು. ರಾಷ್ರೀಯ ಹೆದ್ದಾರಿಯಲ್ಲಿದ್ದ ಬಾರ್ ಗಳನ್ನು ಮುಚ್ಚಿ ಇಲ್ಲಿಗೆ ಸ್ಥಳಾಂತರಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪಂಚಾಯ್ತಿ ಸದಸ್ಯ ಮಾದೇಗೌಡ ಹಾಗೂ ಮಹಾನಗರ ಪಾಲಿಕೆಯ ಕೆಲ ಸದಸ್ಯರಿಂದಲೂ ಸಾರ್ವಜನಿಕರ ಪ್ರತಿಭಟನೆಗೆ ಸಾಥ್ ನೀಡಿದರು.


ಒಂದು ಕಮೆಂಟನ್ನು ಬಿಡಿ