ಜಿಂಕೆ ಅನುಮಾನಾಸ್ಪದ ಸಾವು !


30-08-2017 1042

ಮೈಸೂರು: ಆಹಾರ ಹುಡುಕಿಕೊಂಡು ದಾರಿ ತಪ್ಪಿ ಕಾಡಿನಿಂದ, ನಾಡಿನತ್ತ ಬಂದಿದ್ದ ಜಿಂಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯು, ಮೈಸೂರಿನ ಹೊರ ವಲಯದ ಬೋಗಾದಿ ಬಳಿಯಿರುವ ಮರಿಯಪ್ಪನ ಕೆರೆ ಸಮೀಪ ನಡೆದಿದೆ. ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯ ಮೃತ ದೇಹದ ಮೇಲೆ ಯಾವುದೇ ರೀತಿಯ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಜಿಂಕೆ ಮೃತದೇಹವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳ ತಂಡದಿಂದ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಜಿಂಕೆಯ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಜಿಂಕೆಯ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಮೈಸೂರು ಜಿಂಕೆ ಅನುಮಾನಾಸ್ಪದ ಸಾವು !