ಖೈದಿಗಳ ಕೋಣೆಗಳಲ್ಲಿ ಮೊಬೈಲ್ ಪತ್ತೆ !


29-08-2017 798

ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಧಾರವಾಡ ಎಸ್.ಪಿ,  ಜಿ.ಸಂಗೀತಾ ನೇತೃತ್ವದಲ್ಲಿ ದಾಳಿ ಮಾಡಿದ್ದು, ಎಸ್.ಪಿ ಗೆ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ಪೊಲೀಸರು ಸಾಥ್ ನೀಡಿದ್ದಾರೆ. ಹತ್ತು ಪೊಲೀಸ್ ಅಧಿಕಾರಿಗಳಿಂದ ಕಾರಾಗೃಹ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಕೈದಿಗಳ ಕೋಣೆಗಳಲ್ಲಿ ಹಲವು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರಾಗೃಹವು ಜಿಲ್ಲೆಯ ಉಪನಗರ ಠಾಣಾ ವ್ಯಾಪ್ತಿಯಲ್ಲಿದ್ದು, ಕಾರಾಗೃಹಗಳಲ್ಲಿ ಅವ್ಯವಹಾರ ಮತ್ತು ಇತರೆ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ