ಭೀಕರ ಅಪಘಾತ ಮೂವರ ದುರ್ಮರಣ !


26-08-2017 1069

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 209 ರ ಸಾತನೂರಿನ ರಾಯರದೊಡ್ಡಿಯ ಬಳಿ, ವೇಗವಾಗಿ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 3 ಜನರು ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದಾರೆ.

ಮೃತರನ್ನು ಜೆ.ಪಿ.ನಗರದ 6ನೇ ಮುಖ್ಯರಸ್ತೆಯ ವೈಜಯಂತಿ (50) ಹಾಗೂ ಅವರ ಪುತ್ರಿ ರಂಜಿತಾ (18)ಬೈರೇಗೌಡ (40) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಪುಟ್ಟಸ್ವಾಮಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ  ಸ್ಥಿತಿ ಗಂಭೀರವಾಗಿದೆ. ದುರ್ಘಟನೆಯಲ್ಲಿ ಮಕ್ಕಳಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುಟ್ಟಸ್ವಾಮಿ ಅವರು ಪತ್ನಿ ವೈಜಯಂತಿ, ಮಗಳು ರಂಜಿತಾ, ಅಣ್ಣನ ಮಗ ಬೈರೇಗೌಡ, ಹಾಗೂ ಇವರ ಮಕ್ಕಳಾದ ಪವಿತ್ರ, ಸವಿತಾ ಎಂಬವರೊಂದಿಗೆ ತಮ್ಮ ಸ್ವಂತ ಊರಾದ ಮಳವಳ್ಳಿ ತಾಲ್ಲೂಕಿನ ಬನ್ನೂರಿಗೆ ಹೋಗುತಿದ್ದು, ಮಾರ್ಗ ಮಧ್ಯೆ, ರಾಯರದೊಡ್ಡಿಯ ಬಳಿ ಕೆ.ಎಸ್‍.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಮೃತದೇಹಗಳನ್ನು ಕನಕಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕಾಲುಮುರಿದ ಪುಟ್ಟಸ್ವಾಮಿಯವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 


ಒಂದು ಕಮೆಂಟನ್ನು ಬಿಡಿ