ರಸ್ತೆ ಅಪಘಾತ: ವ್ಯಕ್ತಿ ಬಲಿ !


22-08-2017 1078

ಬೆಂಗಳೂರು: ಹೆಚ್.ಎ.ಎಲ್. ನ ಕಾಡಬೀಸನಹಳ್ಳಿ ಬಳಿ ಮಂಗಳವಾರ ನಸುಕಿನಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‍ ನಲ್ಲಿ ಹೋಗುತ್ತಿದ್ದ, ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹದೇವಪುರದ ಎಲ್.ಪಿ.ಸಿಂಗ್ ಎಂದು (30) ಮೃತಪಟ್ಟವರನ್ನು ಗುರುತಿಸಲಾಗಿದೆ.  ಈತ ಗ್ಲೋಬ್ ಕಿಚನ್ ಕಂಪನಿಯ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಕಾಡಬೀಸನಹಳ್ಳಿಯ ಗ್ಲೋಬ್ ಕಿಚನ್ ಕಂಪನಿಯಲ್ಲಿ ರಾತ್ರಿ ಪಾಳಯದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮುಂಜಾನೆ 2.45ರ ವೇಳೆ ಮನೆಗೆ ಬೈಕ್‍ನಲ್ಲಿ ಎಲ್.ಪಿ. ಸಿಂಗ್ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಕಾಡಬೀಸನಹಳ್ಳಿ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಣಿಪುರ ಮೂಲದ ಸಿಂಗ್ ಕಳೆದ ಕೆಲ ವರ್ಷಗಳಿಂದ ಮಹದೇವಪುರದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಪ್ರಕರಣ ದಾಖಲಿಸಿರುವ ಹಳೆ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಅಪಘಾತವೆಸಗಿದ ವಾಹನಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ