ವೈದ್ಯರ ನಿರ್ಲಕ್ಷ್ಯ: ಮೂರು ದಿನದ ಮಗು ಸಾವು !


22-08-2017 992

ಕೋಲಾರ: ವೈದ್ಯರ ನಿರ್ಲಕ್ಷ್ಯಕ್ಕೆ  ಮೂರು ದಿನದ ಗಂಡು ಮಗು ಸಾವನ್ನಪ್ಪಿರುವ ಘಟನೆಯೂ, ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ನವಜಾತ ಶಿಶುಗಳ ತೀವ್ರನಿಗಾ ಘಟಕದಲ್ಲಿ ಘಟನೆ ಸಂಭವಿಸಿದೆ. ಕೋಲಾರ ತಾಲ್ಲೂಕಿನ ಗಂಗಾಪುರ ಗ್ರಾಮದ ವೀಣಾ-ನರಸಿಂಹಾ ದಂಪತಿಗೆ ಸೇರಿದ ಮಗು ಎಂದು ತಿಳಿದಿ ಬಂದಿದೆ. ಭಾನುವಾರ ಸಹಜ ಹೆರಿಗೆಯಾಗಿ ಚೆನ್ನಾಗಿದ್ದ ಮಗು, ಸಂಜೆಯಿಂದ ವಾಂತಿ ಹೆಚ್ಚಾಗಿ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಆದರೆ ಹೆರಿಗೆ ಮಾಡಿಸಲು ವೈದ್ಯರು ಮೂರು ಸಾವಿರ ಲಂಚ ಪಡೆದಿರುವುದಾಗಿ ಪೋಷಕರ ಆರೋಪಿದ್ದಾರೆ. ಅಲ್ಲದೇ ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ದೂರಿದ್ದಾರೆ. ಈ ಕುರಿತು ಪೋಷಕರು ಹಾಗು ವೈದ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ