ದುಡ್ಡು ಕೊಟ್ಟು ಸರ್ವೇ ಮಾಡಿಸಲಾಗಿದೆ..?


22-08-2017 1358

ಮೈಸೂರು: ಸಿದ್ದರಾಮಯ್ಯ ಅವರಿಗೆ ಅಧಿಕಾರ ಕೊಟ್ಟಿರುವುದು ಆಡಳಿತ ನಡೆಸುವುದಕ್ಕಾಗಿ, ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇರುವಾಗಲೇ, ಖಾಸಗಿ ಸಂಸ್ಥೆಯ ಮೂಲಕ ಸರ್ವೆ ಮಾಡಿಸಿ ತಮ್ಮ ಪಕ್ಷ ಗೆಲ್ಲುತ್ತದೆ ಎಂದು ಬಿಂಬಿಸಿಕೊಳ್ಳುತ್ತಿರುವುದಕ್ಕಾಗಿ ಅಲ್ಲ ಎಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ, ಮಾಜಿ ಸಂಸದ ಎಚ್.ವಿಶ್ವನಾಥ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ದುಡ್ಡು ಕೊಟ್ಟು ತಮ್ಮ ಪರ ತೀರ್ಪು ಬರುವಂತೆ ಸರ್ವೇ ಮಾಡಿಸಲಾಗಿದೆ, ಎಂದು ಆರೋಪಿಸಿದ್ದೂ, ಇದರ ಬದಲು ಎಷ್ಟು ಸಚಿವರ ಮನೆ ಮೇಲೆ ಐಟಿ ದಾಳಿ ನಡೆದಿದೆ, ಮತ್ತೆಷ್ಟು ಸಚಿವರ ಮನೆ ಮೇಲೆ ಐಟಿ ದಾಳಿ ನಡೆಯಲಿದೆ ಎಂದು ಸರ್ವೆ ಮಾಡಿಸಬೇಕಿತ್ತು, ಅಲ್ಲದೇ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸರ್ವೆ ಮಾಡಿಸಬೇಕಾಗಿತ್ತು ಎಂದು ಹರಿಹಾಯ್ದರು. ಈ ಹಿಂದೆ ನಡೆಸಿದ ಸಮೀಕ್ಷೆಗಳೆಲ್ಲಾ ತಲೆ ಕೆಳಗಾಗಿವೆ, ಇದು ಅದೇ ರೀತಿ ಆಗಲಿದೆ ಎಂದು ಭವಿಷ್ಯನುಡಿದರು. ‘ಸಿ ಫೋರ್’ ಅಂದ್ರೆ ಕ್ಯಾಶ್ ಫೋರ್ ಎಂದು ಲೇವಡಿ ಮಾಡಿದ ವಿಶ್ವನಾಥ್ ಅವರು, ಸುಳ್ಳು ಸರ್ವೇಗಳನ್ನು ಮಾಡಿಸಿ, ಜನರನ್ನು ನಂಬಿಸಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ