ಬೆಂಕಿ ಅನಾಹುತ ಅಪರೂಪದ ವಸ್ತುಗಳು ಭಸ್ಮ


22-08-2017 1079

ಬೆಂಗಳೂರು: ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ನವರತನ್ನ ಆಂಟಿಕ್ ಆರ್ಟ್ಸ್ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ್ದೂ, ಲಕ್ಷಾಂತರ ರೂಪಾಯಿ ಮೌಲ್ಯದ ಅಪರೂಪದ ವಸ್ತುಗಳು ಭಸ್ಮವಾಗಿವೆ. ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ನವರತನ್ನ ಆಂಟಿಕ್ ಆರ್ಟ್ಸ್ ಕಟ್ಟಡದ ನಾಲ್ಕನೆ ಮಹಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೆ ಅಗ್ನಿಶಾಮಕ ದಳದ ಹತ್ತು ವಾಹನಗಳು ಆಗಮಿಸಿ, ಸತತ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ . ನಾಲ್ಕು ಮಹಡಿಯ ಕಟ್ಟಡದಲ್ಲಿ ನೆಲ ಮತ್ತು ನಾಲ್ಕನೇ ಮಹಡಿಯಲ್ಲಿ ನವರತನ್ನ ಆಂಟಿಕ್ ಆರ್ಟ್ಸ್ ಮಳಿಗೆಗಳಿದ್ದು, ಮೂರನೇ ಮಹಡಿಯಲ್ಲಿ ಖಾಸಗಿ ಚಾನೆಲ್ ಕಚೇರಿ ಹಾಗೂ ಒಂದನೆ ಮಹಡಿಯಲ್ಲಿ ಕಾವೇರಿ ಆರ್ಟ್ಸ್ ಎಂಪೊರಿಯಂ ಮಳಿಗೆಗಳಿವೆ.

ಬೆಳಗಿನ ಜಾವ ಮೂರು ಗಂಟೆಗೆ ಬೆಂಕಿ ಅವಘಡ ಸಂಭವಿಸಿರುವುದು ತನ್ನ ಗಮನಕ್ಕೆ ಬರುತ್ತಿದಂತೆ, ಅಗ್ನಿಶಾಮಕ ದಳಕ್ಕೆ ಮಾಹಿತಿ ಮಾಹಿತಿ ನೀಡಿದೆ. ಅಲ್ಲದೇ ಕಟ್ಟಡದಲ್ಲಿರುವ ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿ ಅವರು ಕಟ್ಟಡದಿಂದ ಹೊರಬರುವಂತೆ ಮಾಡಿದರಿಂದ ದೊಡ್ಡ ಅನಾಹುತ ತಪ್ಪಿದಂತಾಯಿತು ಎಂದು ಭದ್ರತಾ ಸಿಬ್ಬಂದಿ ತಿಳಿಸಿದರು.


ಒಂದು ಕಮೆಂಟನ್ನು ಬಿಡಿ