ಇಂದಿರಾಗಾಂಧಿ ಕನಸು ಕರ್ನಾಟಕದಲ್ಲಿ ನನಸು !


16-08-2017 1204

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕನಸು ಕರ್ನಾಟಕದಲ್ಲಿ ನನಸಾಗುತ್ತಿದೆ, ಬಹಳ ಹೆಮ್ಮೆಯಿಂದ ಹಾಗೂ ಸಂತೋಷದಿಂದ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಬೆಂಗಳೂರಿನ ಜಯನಗರದದ ಕನಕನಪಾಳ್ಯದಲ್ಲಿ ನಿರ್ಮಾಣ ಮಾಡಲಾಗಿರುವ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟಿಸಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,  ಮೊದಲಿಗೆ ಸಿಎಂ ಸಿದ್ದರಾಮಯ್ಯ ಮತ್ತು ಅವರ ತಂಡವನ್ನು ಅಭಿನಂಧಿಸುತ್ತೇನೆ. ಇಂದಿರಾ ಗಾಂಧಿ ಅವರ ಕನಸು ಇಲ್ಲಿ ನನಸಾಗುತ್ತಿದೆ. ಇಂದಿರಾ ಗಾಂಧಿ ಅವರು ಕೂಡ ರೋಟಿ, ಮಕಾನ್, ಕಪಡಾ ಬಗ್ಗೆ ಮಾತನಾಡುತ್ತಿದ್ದರು. ಇದೀಗ  ಅ ಕನಸು ಇಲ್ಲಿ ನನಸಾಗುತ್ತಿದೆ. ರಾಜ್ಯದ ಯಾವುದೇ ವ್ಯಕ್ತಿಯೂ ಹಸಿವಿನಿಂದ ಮಲಗಬಾರದು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇಲ್ಲಿ ಕಡಿಮೆ ಹಣಕ್ಕೆ ಗುಣಮಟ್ಟದ ಆಹಾರವನ್ನು ಜನತೆಗೆ ನೀಡಲಾಗುತ್ತಿದೆ. ಬೆಂಗಳೂರಿನ ಯಾವ ವ್ಯಕ್ತಿಯೂ ಹಸಿವಿನಿಂದ ಇರಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಸಿಎಂ ಸಿದ್ದರಾಮಯ್ಯ ಈ ಯೋಜನೆ ರೂಪಿಸಿದ್ದಾರೆ. ತುಂಬಾ ಹೆಮ್ಮೆಯಿಂದ ಮತ್ತು ಸಂತೋಷದಿಂದ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.

 


ಒಂದು ಕಮೆಂಟನ್ನು ಬಿಡಿ