94 ಮಕ್ಕಳು ಸಾವು: ಆರೋಪಿಗಳು ದೋಷಮುಕ್ತ


11-08-2017 462

ಚೆನ್ನೈ: 2004ರಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಕುಂಭಕೋಣಂ ನ ಶಾಲೆಯ ಬೆಂಕಿ ಅನಾಹುತ ಪ್ರಕರಣದ ಎಲ್ಲಾ 10 ಆರೋಪಿಗಳನ್ನು ಮದ್ರಾಸ್ ಹೈಕೋರ್ಟ್ ದೋಷ ಮುಕ್ತಗೊಳಿಸಿದೆ. ಪ್ರಕರಣ ಕುರಿತಂತೆ ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಎಂ. ಸತ್ಯನಾರಾಯಣನ್ ಹಾಗೂ ವಿ.ಎಂ. ವೇಲುಮಣಿ ಅವರುಳ್ಳ ನ್ಯಾಯಪೀಠ ಎಲ್ಲಾ ಆರೋಪಿಗಳನ್ನೂ ಬಿಡುಗಡೆ ಮಾಡುವಂತೆ ಆದೇಶಿಸಿದೆ.

2004ರ ಜುಲೈ 16ರಂದು, ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿದ್ದ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಕಿ ಅವಗಢ ಸಂಭವಿಸಿತ್ತು. ಇದರಲ್ಲಿ 94 ಮಕ್ಕಳು ಸಾವನ್ನಪ್ಪಿದ್ದರು. ಈ ಮೂಲಕ, ಇದೇ ಪ್ರಕರಣದ ವಿಚಾರಣೆಯಲ್ಲಿ ಕೆಳ ಹಂತದ ನ್ಯಾಯಾಲಯ ಈ ಆರೋಪಿಗಳಿಗೆ ವಿಧಿಸಿದ್ದ ಕಾರಾಗೃಹ ವಾಸದ ಶಿಕ್ಷೆಯನ್ನು ಅದು ತಳ್ಳಿಹಾಕಿದೆ. ಇನ್ನು, ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಪರಿಗಣಿಸಲ್ಪಟ್ಟಿದ್ದ ಶಾಲೆಯ ಸಂಸ್ಥಾಪಕರ ಪತ್ನಿಯು ವಿಚಾರಣೆ ನಡೆಯುತ್ತಿರುವ ಹಂತದಲ್ಲೇ ಮರಣ ಹೊಂದಿರುವುದರಿಂದಾಗಿ ಅವರ ವಿರುದ್ಧದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.


ಒಂದು ಕಮೆಂಟನ್ನು ಬಿಡಿ