ಕಾವ್ಯಶ್ರೀ ಸಾವು: ನ್ಯಾಯ ಕೋರಿ ಪ್ರತಿಭಟನೆ !


09-08-2017 1403

ಮಂಗಳೂರು: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಸಾವಿಗೆ ನ್ಯಾಯ ಕೋರಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದೂ, ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು ಭಾಗಿಯಾಗಿದ್ದವು, ಕಾವ್ಯಶ್ರೀ ಸಾವಿನ ಕೂಲಂಕಶ ತನಿಖೆಗೆ ಒತ್ತಾಯಿಸಿದ್ದಾರೆ. ಕಾವ್ಯಾ ಪೋಷಕರಾದ ಬೇಬಿ ಹಾಗೂ ಲೋಕೇಶ್ ಅವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕಳೆದ ಜುಲೈ 20 ರಂದು ಆಳ್ವಾಸ್ ಹಾಸ್ಟೆಲ್ ನಲ್ಲಿ ಕಾವ್ಯಶ್ರೀ ಸಾವನ್ನಪ್ಪಿದ್ದರು. ಕಾವ್ಯಾ ಸಾವು ಆತ್ಮಹತ್ಯೆ ಅಲ್ಲ ಬದಲಾಗಿ ಕೊಲೆ ಎಂದು ಪೋಷಕರು ಆರೋಪಿಸುತ್ತಿದ್ದೂ, ಸಾವಿಗೆ ನ್ಯಾಯ ಕೋರಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ