ನಕಲಿ ಕಂಪನಿ ಬಟ್ಟೆ ಮಾರಾಟ: ವ್ಯಕ್ತಿ ಬಂಧನ !


07-08-2017 1035

ಬೆಂಗಳೂರು: ಅಲೆನ್ ಸೋಲಿ, ಲಿವೈಸ್, ಪೂಮಾ, ಅಡಿಡಾಸ್ ಕಂಪನಿಯ ನಕಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪವನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಲಕ್ಷ 16 ಸಾವಿರ ಮೌಲ್ಯದ ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಹಳೆ ಬಾಗಲೂರು ಲೇಔಟ್‍ನ ಅನಿಸ್ ಅಲಿಯಾಸ್ ಮೆಡ್ (24) ಬಂಧಿತ ಆರೋಪಿಯಾಗಿದ್ದಾನೆ. ಕಮ್ಮನಹಳ್ಳಿಯ ಸೇಂಟ್ ಥಾಮಸ್ ಟೌನ್‍ ನ ಅಂಗಡಿಯೊಂದರಲ್ಲಿ, ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 2 ಲಕ್ಷ 16 ಸಾವಿರ ಮೌಲ್ಯದ ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಒಂದು ಕಮೆಂಟನ್ನು ಬಿಡಿ