ಕೌಟುಂಬಿಕ ಕಲಹ: ಪತಿ-ಪತ್ನಿ ನೇಣಿಗೆ ಶರಣು !


07-08-2017 1244

ಬೆಂಗಳೂರು: ನಗರದ ಹೊರವಲಯದ ಹೊಸಕೋಟೆಯ ಬೇಗೂರಿನಲ್ಲಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. . ಆತ್ಮಹತ್ಯೆ ಮಾಡಿಕೊಂಡವರನ್ನು ಬೇಗೂರಿನ ಕ್ಯಾಬ್ ಚಾಲಕ ಶಿವರಾಜ್(30) ಮತ್ತವರ ಪತ್ನಿ ರಾಧ(27) ಎಂದು ಗುರುತಿಸಲಾಗಿದೆ. ರಾತ್ರಿ ಕೆಳಗಿನ ಮನೆಯಲ್ಲಿ ತಂದೆ ತಾಯಿ ಇದ್ದು ಮೊದಲ ಮಹಡಿಯಲ್ಲಿ ಮಲಗಲು ಹೋಗಿದ್ದ ಶಿವರಾಜ್ ಹಾಗೂ ರಾಧ ಇಬ್ಬರು ಮೇಲ್ಛಾವಣಿಯ ಪೈಪ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 8ಗಂಟೆಯಾದರೂ ಇಬ್ಬರು ಕೆಳಗಿಳೀದು ಬಾರದಿದ್ದರಿಂದ ಆತಂಕಗೊಂಡ ಶಿವರಾಜ್ ಅವರ ತಂದೆ ತಾಯಿ ಮೊದಲ ಮಹಡಿಗೆ ಹೋಗಿ ನೋಡಿದಾಗ ಬಾಗಿಲಿಗೆ ಚಿಲಕ ಹಾಕಿತ್ತು. ಎಷ್ಟು ಬಾರಿ ಬಾಗಿಲು ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡು ಬಾಗಿಲು ಒಡೆದು ನೋಡಿದಾಗ, ಇಬ್ಬರು ನೇಣಿಗೆ ಶರಣಗಾಗಿದ್ದರು, ಕಾರು ಚಾಲಕನಾಗಿದ್ದ ಶಿವರಾಜ್ 6 ವರ್ಷಗಳ ಹಿಂದೆ ವಿವಾಹವಾಗಿದ್ದರು ದಂಪತಿಗೆ 4 ವರ್ಷದ ಗಂಡು ಮಗುವಿದೆ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆಗಾಗ ದಂಪತಿ ನಡುವೆ ಜಗಳ ವಾಗುತ್ತಿದ್ದು ರಾತ್ರಿ ಕೂಡ ಇಬ್ಬರು ಜಗಳ ಮಾಡಿಕೊಂಡಿದ್ದಾರೆ ಜಗಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ