ಉಪನ್ಯಾಸಕರ ಕೈ ಕತ್ತರಿಸಿದ್ದವನ ಬಂಧನ !


05-08-2017 336

ಪ್ರವಾದಿ ಮೊಹಮ್ಮದ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪದ ಮೇಲೆ ಉಪನ್ಯಾಸರ ಕೈ ಕತ್ತರಿಸಿ ಪರಾರಿಯಲ್ಲಿದ್ದ,  ಪಿ.ಎಫ್.ಐ ಕಾರ್ಯಕರ್ತ ಮಸೂರ್ ನನ್ನು ಎನ್.ಐ.ಎ ಬಂಧಿಸಿದೆ. 2010 ರಲ್ಲಿ ಮೂಲಭೂತವಾದಿ ಮತಾಂಧರಿಂದ ಕೈ ಕಳೆದುಕೊಂಡ ನಂತರ ಉಪನ್ಯಾಸಕ ಹುದ್ದೆಯಿಂದ ಟಿ.ಜೆ. ಜೋಸೆಫ್ ಕಿತ್ತೆಸೆಯಲ್ಪಟ್ಟಿದ್ದರು. ಇದೇ ಕಾರಣಕ್ಕಾಗಿ ಜೋಸೆಫ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಸ್ಲಿಂ ಮೂಲಭೂತವಾದಿ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ'ದ ಕಾರ್ಯಕರ್ತರು ಜೋಸೆಫ್ ಅವರ ಕೈಕತ್ತರಿಸಿದ್ದನ್ನ ಕ್ರೈಸ್ತರು ಬೆಂಬಲಿಸಿರಲಿಲ್ಲ.

ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿ ಮೊಹಮ್ಮದ್ ಎಂದು ನಮೂದಿಸದೆ ಕೇವಲ ಮೊಹಮ್ಮದ್ ಎಂಬ ಪಾತ್ರವನ್ನು ಸೃಷ್ಟಿಸಿ ಸಂಭಾಷಣೆ ನಡೆಸುವ ಚಿತ್ರಣ ಮಾಡಿದ್ದ ಜೋಸೆಫ್, ಇಸ್ಲಾಂಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಬಿಡುಗಡೆಯಾದ ನಂತರ ಪಿಎಫ್ಐ ಕಾರ್ಯಕರ್ತರು ಉಪನ್ಯಾಸಕನ ಬಲಗೈಯನ್ನು ಕತ್ತರಿಸಿ ಹಾಕಿದ್ದರು. 2015 ರಲ್ಲಿ ಈ ಪ್ರಕರಣದ 13 ಆರೋಪಿಗಳು ಶರಣಾಗಿದ್ದರು. ಆದರೆ ಪ್ರಮುಖ ಆರೋಪಿ ಮಸೂರ್ ಮಾತ್ರ ತಲೆ ಮರಿಸಿಕೊಂಡಿದ್ದ, ಆದರೆ ಇದೀಗ  ಮಸೂರ್ ನನ್ನು ಎನ್.ಐ.ಎ  ಬಂಧಿಸಿದೆ.

 


ಒಂದು ಕಮೆಂಟನ್ನು ಬಿಡಿ