ಸೋತರೂ ಗೆಲ್ಲುವ ಪ್ರಥಮ್


29-01-2017 683

ಕಲರ್ಸ್ ಕನ್ನಡದ ಬಿಗ್ ಬಾಸ್ - ರ ವಿಜೇತ ಯಾರು ಅನ್ನೋದು ಮುಖ್ಯ ಆಗೋದಕ್ಕಿಂತ ಮೊದಲು,ಪ್ರಥಮ್ ಗೆದ್ದರೆ ಏನಾಗಬಹದು ಎಂದು ಊಹಿಸಬೇಕಾಗುತ್ತದೆ. ಆದರೆ ಪ್ರಥಮ್ ಗೆದ್ದರೂ ಗೆಲ್ಲದಿದ್ದರೂ ಗೆದ್ದ ಹಾಗೆಯೇ ಎನ್ನುತ್ತಾರೆ ಟಿವಿ ಕಾರ್ಯಕ್ರಮ ವಿಶ್ಲೇಷಕರು. ಅವರ ಪ್ರಕಾರ ಗೆದ್ದರೆ ಪ್ರಥಮ್ ಗೆ ಹಣ ಸಿಗುತ್ತದೆ ಆದರೆ ಗೆಲ್ಲದಿದ್ದರೂ ಬೇಕಾದಷ್ಟು ಹಣ ಮಾಡಿಕೊಳ್ಳುವ ಅವಕಾಶಗಳು ಸಿಗುತ್ತವೆ. ಬಿಗ್ ಬಾಸ್ ನ ಈ ಆವೃತ್ತಿಯಲ್ಲಿ ಪ್ರಥಮ್ ಈಗಾಗಲೇ ಗೆದ್ದಂತೆಯೇ ಎನ್ನುತ್ತಾರೆ ಕನ್ನಡದ ಸೆಲೆಬ್ರಿಟಿ ವಾಚರ್ಸ್. ಪ್ರಥಮ್ ಗೆ ಈಗಾಗಲೇ ಬಹಳಷ್ಟು ಜನಪ್ರಿಯತೆ ಇದೆ ಮತ್ತು ಆತನ ಹಾವ ಭಾವ ನಡವಳಿಕೆಗಳನ್ನು ಇಷ್ಟ ಪಡುವವರಿದ್ದಾರೆ. ಕನ್ನಡ ಟಿವಿ ಸಿನೆಮಾಗಳಲ್ಲಿ ನೋಡಿದ ಮುಖಗಳನ್ನೇ ನೋಡಿ ಆಡಿದ ಆಟಗಳನ್ನೇ ನೋಡಿ ಬೇಸತ್ತಿರುವ ವೀಕ್ಷಕ ಪ್ರಥಮ್ ಗೆ ಮಣೆ ಹಾಕುವುದರಲ್ಲಿ ಸಂದೇಹವೇ ಇಲ್ಲ ಎನ್ನಲಾಗುತ್ತಿದೆ. ಪ್ರಥಮ್ ಗೆ ಅಭಿಮಾನಿಗಳು ಹೆಚ್ಚಾಗಿಬಿಟ್ಟಿದ್ದಾರೆ, ಆ ಕಾರಣದಿಂದ ಆತ ಸಿನೆಮಾಗಳಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಆತನನ್ನೇ ಹೀರೋ ಕೂಡ ಮಾಡಿ ಸಿನೆಮಾ ಮಾಡಲು ಕೆಲವರು ಮುಂದೆ ಬರುತ್ತಾರೆ. ರಿಯಾಲಿಟಿ ಷೋನಲ್ಲಿ ಜಡ್ಜ್ ಆಗಿ ಅಥವಾ ಏನ್ಕರ್ ಆಗಿ ಅವಕಾಶ ಸಿಗುವ ಸಾಧ್ಯತೆ ಇದೆ, ಮತ್ತು ಅದರೊಂದಿಗೆ ಆತನನ್ನು ನಿರ್ದೇಶಕನನ್ನಾಗಿ ಮಾಡಿ ಸಿನೆಮಾ ಮಾಡಲೂ ಅನೇಕ ಮಂದಿ ಮುಂದೆ ಬರಬಹುದು. ಇದೆಲ್ಲದರೊಂದಿಗೆ ಪ್ರಥಮ್ ಅರೆಬರೆ ಮಾಡಿ ಉಳಿದುಹೋಗಿರುವ ಸಿನೆಮಾವನ್ನು ಮುಗಿಸಲು ಯಾರಾದರೂ ನಿರ್ಮಾಪಕರು ಮುಂದೆ ಬರಬಹುದು ಎನ್ನಲಾಗಿದೆ. ಆದರೆ ಪ್ರಥಮ್ ಸಿನೆಮಾ ಹೇಗಿರುತ್ತದೆ ಎಂದು ಅದಕ್ಕೆ ಸಂಬಂಧಪಟ್ಟ ಯೂಟ್ಯೂಬ್ ವಿಡಿಯೋಗಳನ್ನ ನೋಡಿದರೆ ಗೊತ್ತಾಗಿಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ಮನೆಯಲ್ಲಿ ಸಂಜನಾ ಹಿಂದೆ ಹೋದ ಪ್ರಥಮ್ ಗೆ ಹೊರಗೆ ಬಂದ ಮೇಲೆ ಸಾವಿರಾರು ಹುಡುಗಿಯರ ಪ್ರಪೋಸಲ್ ಬರುವುದು ಕಂಡಿತಾ ಎಂದು ಹೇಳುತ್ತಾರೆ. ಆದರೆ ಈಗಾಗಲೇ ಜನಪ್ರಿಯತೆಯನ್ನು ತಲೆಗೆ ಏರಿಸಿಕೊಂಡಿರುವ ಪ್ರಥಮ್ ಈ ಎಲ್ಲ ಅವಕಾಶಗಳನ್ನು ಹೇಗೆ ಬಳಸಿ ಕೊಳ್ಳುತ್ತಾರೆ ಮತ್ತು ಎಷ್ಟು ಪ್ರಬುದ್ದತೆಯಿಂದ ವರ್ತಿಸುತ್ತಾರೆ ಎಂದು ನೋಡಬೇಕಾಗಿದೆ. ಇಲ್ಲ, ಮಂಗನ ಕೈಗೆ ಮಾಣಿಕ್ಯ ಕೊಟ್ಟಹಾಗೆ ಆಡಬಹುದೇ ಎಂಬ ಕುತೂಹಲವೂ ಇದೆ. ಆದರೆ ಬಿಗ್ ಬಾಸ್ ನಿಂದ ಹೊರಬಂದ ಪ್ರಥಮ್ ಕೆಲವು ದಿನಗಳ ಮಟ್ಟಿಗಾದರೂ ಸ್ಟಾರ್ ಆಗುವುದು ಖಚಿತ ಎಂದು ಹೇಳಬಹುದು.

Links :ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲ