ಮಾನವೀಯತೆ ಮರೆತ ವೈದ್ಯ !


03-08-2017 465

ಕೊಪ್ಪಳ: ವೈದ್ಯರೊಬ್ಬರು ಕಾರಿನಲ್ಲಿ ತೆರಳುತ್ತಿದ್ದ ವೇಳೆ, ತನ್ನ ಕಾರಿಗೆ ಬೈಕ್ ಸವಾರನೊಬ್ಬ ಗುದ್ದಿದ್ದರಿಂದ ಆಕ್ರೋಶಗೊಂಡು, ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಕೊಪ್ಪಳ ನಗರದ ಕಿಶೋರಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.  ಜಿಲ್ಲಾಸ್ಪತ್ರೆಯಲ್ಲಿ ನರರೋಗ ತಜ್ಞನಾಗಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ, ಡಾ.ಓಂಕಾರ ಮೂರ್ತಿ ಎಂಬುವರು ಹಲ್ಲೆ ನಡೆಸಿದ್ದಾರೆ. ವೈದ್ಯ ಜಿಲ್ಲಾ ಆಸ್ಪತ್ರೆಗೆ ಹೊರಟ ವೇಳೆ ನಡೆದ ಅಪಘಾತದಲ್ಲಿ, ಬೈಕ್ ಮೇಲಿದ್ದ ಮಗು ಕೆಳಗೆ ಬಿದ್ದಿತ್ತು, ಈ ವೇಳೆ ಸಹಾಯ ಮಾಡಬೇಕಿದ್ದ ವೈದ್ಯ, ಇದಕ್ಕೆ ವಿರುದ್ಧವಾಗಿ ಸಹಾಯ ಮಾಡಿದವರ ಮೇಲೆ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಮಾನವೀಯತೆ ತೋರಬೇಕಿದ್ದ ವೈದ್ಯನಿಂದಲೇ ಮಲ್ಲಿಕಾರ್ಜುನ ಪೂಜಾರ ಎಂಬಾತ ಹಲ್ಲೆಗೊಳಗಾಗಿದ್ದಾರೆ. ಅಲ್ಲದೇ ಬೈಕ್ ಮೇಲಿಂದ ಬಿದ್ದ ಮಗುವಿನ ಬಗ್ಗೆಯೂ ಮಾನವೀಯತೆ ಮರೆತಿದ್ದಾರೆ. ಇನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಅಪಘಾತದಲ್ಲಿ ಗಾಯಗೊಂಡ ಮಗುವಿಗೆ ಸಹಾಯ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೇಳಿದಾಗ ನನ್ನ ಕಾರ್ ಡ್ಯಾಮೇಜ್ ಆಗಿದೆ ಎಂದು ಕೋಪಗೊಂಡು ಸಾರ್ವಜನಿಕರಿಗೆ ಬೈದಾಡಿ. ಸ್ಥಳದಿಂದ ಹೊರಟು ಹೋಗಿದ್ದಾರೆ. ಕೊಪ್ಪಳ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಕೊಪ್ಪಳ ಮಾನವೀಯತೆ ಮರೆತ ವೈದ್ಯ !