ಜಾನುವಾರುಗಳೊಂದಿಗೆ ನಾಡಕಚೇರಿಗೆ ಮುತ್ತಿಗೆ !


03-08-2017 1289

ಚಿತ್ರದುರ್ಗ: ಗೋಶಾಲೆಗೆ ಮೇವು ಸರಬರಾಜು ಸ್ಥಗಿತವಾಗಿದ್ದೂ, ಇದರಿಂದ ಜಾನುವಾರುಗಳಿಗೆ ಮೇವಿಲ್ಲದೆ ಪರದಾಟುವಂತಾಗಿದೆ ಎಂದು, ಆಕ್ರೋಶಗೊಂಡ ರೈತರು ನಾಡಕಚೇರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಯು ಚಿತ್ರದುರ್ಗದಲ್ಲಿ ನಡೆದಿದೆ. ಜಿಲ್ಲೆಯ ನಾಡಕಚೇರಿ ಆವರಣಕ್ಕೆ ಜಾನುವಾರುಗಳೊಂದಿ ಮುತ್ತಿಗೆ ಹಾಕಿದ ರೈತರು, ನಾಡಕಚೇರಿ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವಾರದಿಂದ ಮೇವು ಸರಬರಾಜು ಮಾಡುತ್ತಿಲ್ಲ ಎಂದು ರೈತರ ಆರೋಪಿಸಿದ್ದಾರೆ. ಈ ಕುರಿತು ಮನವಿ ನೀಡಿದ್ದರು, ಜಿಲ್ಲಾಡಳಿತ ರೈತರ ಮನವಿಗೆ ಸ್ಪಂದಿಸದಿದ್ದೂ, ಬೀದಿಗಿಳಿದು ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಕೂಡಲೆ  ಗೋಶಾಲೆಗಳಿಗೆ ಮೇವನ್ನು ಸರಬರಾಜು ಮಾಡಬೇಕೆಂದು ಆಗ್ರಹಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ