ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ !


29-07-2017 314

ಉತ್ತರ ಕನ್ನಡ: ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿರುವ ಯಲ್ಲಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ತಡರಾತ್ರಿ ಬಂಧಿಸಿದ್ದಾರೆ. ಹುಬ್ಬಳ್ಳಿಯಿಂದ ಮಂಗಳೂರಿನೆಡೆಗೆ ಮಹೀಂದ್ರ ಮ್ಯಾಕ್ಸ್ ವಾಹನದಲ್ಲಿ 1 ಎಮ್ಮೆ 2 ಆಕಳು ಹಾಗೂ 3 ಕರುಗಳನ್ನು ನೀರು ಆಹಾರವಿಲ್ಲದೆ, ಹಿಂಸಾತ್ಮಕವಾಗಿ ರಾತ್ರಿ 9-30ರ ಸುಮಾರಿಗೆ ಸಾಗಾಟ ಮಾಡಲಾಗುತ್ತಿತ್ತು.  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಾದ ಹುಬ್ಬಳ್ಳಿಯ ನಿವಾಸಿ, ಚಾಲಕ ರಾಜು ಅಲಿಯಾಸ್ ಮೌಲಾಲಿ ಶೌಕತ್ ಅಲಿ. ಜಂಗನೂರು (23) ಹಾಗೂ ಸಹಾಯಕ ಗುರುಸಿದ್ದಪ್ಪ ಮಾರತಪ್ಪ ಉಡಚಪ್ಪನವರ್ (30) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ರಕ್ಷಣೆ ಮಾಡಲಾದ ಜಾನುವಾರುಗಳ ಮೌಲ್ಯ 40 ಸಾವಿರ ಹಾಗೂ ವಾಹನದ ಮೌಲ್ಯ 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಯಲ್ಲಾಪುರ ಪೊಲೀಸರು, ಪಿ.ಎಸ್.ಆಯ್. ಶ್ರೀಧರ್ ಎಸ್.ಆರ್. ಮಾರ್ಗದರ್ಶನದಲ್ಲಿ ಪ್ರಕರಣ ದಾಖಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ