ಮಹಿಳೆ ಅನುಮಾನಾಸ್ಪದ ಸಾವು !


29-07-2017 1439

ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆ, ಅನುಮಾನಾಸ್ಪದವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆಯು ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಮನಗೂಳಿ ಸಮೀಪದ ಇಸ್ಲಾಂಪುರ ಎಂಬಲ್ಲಿ ಘಟನೆ ಸಂಭವಿಸಿದೆ. ಲಕ್ಷ್ಮಿಬಾಯಿ ರಜಪೂತ್ ಮೃತ ಮಹಿಳೆ. ಲಕ್ಷ್ಮಿ ಬಾಯಿಗೆ, ತನ್ನ ಗಂಡನ ಸಹೋದರ  ಆನಂದ್ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ಲಕ್ಷ್ಮಿಬಾಯಿ 12 ವರ್ಷಗಳ ಹಿಂದೆ ರವಿ ಅವರನ್ನು ಮದುವೆ ಆಗಿದ್ದರು. ಆರು ವರ್ಷದ ಹಿಂದೆ ತನ್ನ ಪತಿ ಖಾಯಿಲೆಯಿಂದಾಗಿ ಹಾಸಿಗೆ ಹಿಡಿದಿದ್ದೂ, ಪತಿಯ ಅನಾರೋಗ್ಯದಿಂದ ಲಕ್ಷ್ಮಿಬಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈಕೆ ಕೆಸಲದಿಂದ ಬಂದ ಬಳಿಕ ಪತಿಯ ಸಹೋದರನಾದ ಆನಂದ ಕಿರುಕುಳ ನೀಡುತ್ತಿದ್ದೂ, ಕಳೆದ ರಾತ್ರಿಯೂ ಮಹಿಳೆ ಮಲಗಿದ್ದ ಕೋಣೆಗೆ ಆನಂದ ಪ್ರವೇಶಿಸಿದ್ದ. ಆ ಬಳಿಕವೇ ಮಹಿಳೆ ಸಾವನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತನ್ನ ಹೆಂಡತಿಯನ್ನು ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಪತಿ ರವಿ ಆರೋಪಿಸಿದ್ದಾರೆ. ಸದ್ಯ ಮಹಿಳೆ ಮೃತದೇಹವನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


ಒಂದು ಕಮೆಂಟನ್ನು ಬಿಡಿ