ರಕ್ತದಲ್ಲಿ ಸ್ನಾನ ಮಾಡ್ತಾರಂತೆ ಪುಟಿನ್..?


21-07-2017 2026

ಸಾಮಾನ್ಯವಾಗಿ ನಾವೆಲ್ಲರು ಸ್ನಾನ ಮಾಡಲು ಸಾಬೂನು, ಶಾಂಪೂ, ತಣ್ಣೀರು, ಅಥವಾ ಬಿಸಿನೀರು ಬಳಸುತ್ತೇವೆ, ಆದರೆ ಜಾಗತಿಕ ಮಟ್ಟದ ನಾಯಕರಾದ, ರಷ್ಯಾ ಅಧ್ಯಕ್ಷರು ಸ್ನಾನ ಮಾಡುವ ವಿಧಾನ ಕೇಳಿದರೆ ಒಂದು ನಿಮಿಷ ತಬ್ಬಿಬ್ಬಾಗುವುದಂತೂ ಖಚಿತ. ಹೌದು, ರಷ್ಯಾ ದೇಶದ ಅಧ್ಯಕ್ಷ ವ್ಲಾದಿಮರ್ ಪುಟಿನ್ ಜಿಂಕೆಯ ರಕ್ತದಲ್ಲಿ ಸ್ನಾನ ಮಾಡ್ತಾರಂತೆ. ರಷ್ಯಾದಲ್ಲಿ ಪ್ರಾಚೀನ ಸಂಪ್ರದಾಯದಂತೆ ರಕ್ತದಲ್ಲಿ ಸ್ನಾನ ಮಾಡಿದರೆ, ಪುರುಷರ ಆರೋಗ್ಯ ಮತ್ತು ಲೈಂಗಿಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಕೂಡ ಇದೆ. ಹಾಗಾಗಿ ರಷ್ಯಾದಲ್ಲಿ ದೊಡ್ಡ ಕೊಂಬಿನ ಜಿಂಕೆಯ ರಕ್ತಕ್ಕೆ ಭಾರೀ ಬೇಡಿಕೆ ಇದೆ. ವ್ಲಾದಿಮರ್ ಪುಟಿನ್ ಕೂಡ ಹಲವು ಬಾರಿ ರಕ್ತದಲ್ಲಿ ಸ್ನಾನ ಮಾಡಿದ್ದಾರಂತೆ. ಪುಟಿನ್ ಇತ್ತೀಚೆಗೆ, ಆಲ್ಫಾಯ್ ವರ್ವತಕ್ಕೆ ಪ್ರವಾಸ ಕೈಗೊಂಡಿದ್ದ ಸಂರ್ಭದಲ್ಲಿ ಈ ಸ್ನಾನವನ್ನ ಮಾಡಿದ್ದರು ಎನ್ನಲಾಗುತ್ತಿದೆ. ಅಧ್ಯಕ್ಷರಿಗಾಗಿ ಸ್ನಾನದ ತೊಟ್ಟಿಯನ್ನು ಸಿದ್ಧಪಡಿಸಿ, ಅದಕ್ಕೆ ದೊಡ್ಡ ಜಿಂಕೆಯ ಕೊಂಬು ಕತ್ತರಿಸಿ ತೆಗೆದ ರಕ್ತವನ್ನು ತುಂಬಿಸಲಾಗಿತ್ತು ಎನ್ನಲಾಗುತ್ತಿದೆ. ವ್ಲಾದಿಮರ್ ಪುಟಿನ್ ಯಾವಾಗಲೂ ರಕ್ತದಲ್ಲಿ ಸ್ನಾನ ಮಾಡುವ ಸಂಪ್ರದಾಯ ಅನುಸರಿಸುವುದಿಲ್ಲ. ಆದರೆ, ಹಲವು ಸಲ ಅವರು ಜಿಂಕೆಯ ರಕ್ತದಲ್ಲಿ ಸ್ನಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.


ಒಂದು ಕಮೆಂಟನ್ನು ಬಿಡಿ