ತಹಶೀಲ್ದಾರ್ ಡೆತ್ ನೋಟ್ !


20-07-2017 1076

ಮೈಸೂರು: ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಹಶೀಲ್ದಾರ್ ಶಂಕರಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕರಯ್ಯ ಅವರ ಡೆತ್ ನೋಟ್‌ ನಲ್ಲಿ ಕಾರ್ಯದೊತ್ತಡದ ಕುರಿತು ಉಲ್ಲೇಖಿಸಿರುವ ಮಾಹಿತಿ ಲಭ್ಯವಾಗಿದೆ. ನನಗೆ ಕೆಲಸ ಮಾಡಲು ಆಗುತ್ತಿಲ್ಲ, ತಾಲ್ಲೂಕಿನಲ್ಲಿ ನನ್ನ ಶಕ್ತಿಮೀರಿ ಕೆಲಸ ಬರುತ್ತಿದೆ, ವರ್ಗಾವಣೆಗೆ ಪ್ರಯತ್ನಿಸಿದರು ಅದು ಆಗಿಲ್ಲ, ನನ್ನ ಅನಾರೋಗ್ಯ ನನ್ನನ್ನು ಖಿನ್ನತೆಗೆ ಒಳಗಾಗುವಂತೆ ಮಾಡಿದೆ, ಈ ಕಾರಣದಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ. ನನ್ನ ಮಗಳ ಮದುವೆಯನ್ನು ನನ್ನ ಅಣ್ಣ ಮುಂದೆ ನಿಂತು ಮಾಡಲಿ, ಡೆತ್ ನೋಟ್‌ನಲ್ಲಿ ಕೆಲಸದ ಒತ್ತಡದ ಬಗ್ಗೆ ಉಲ್ಲೇಖವಿದ್ದರೂ ಯಾರ ಮೇಲೂ ಆರೋಪ ಮಾಡಿಲ್ಲ. ತಾನಾಗಿಯೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಉಲ್ಲೇಖ ಮಾಡಿರುವುವುದಾಗಿ, ಪೊಲೀಸ್ ಮೂಲಗಳು ಮಾಹಿತಿ ತಿಳಿಸಿವೆ.‌ ಶಂಕರಯ್ಯ ಪತ್ನಿ ಪುಷ್ಪಲತಾರಿಂದ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ನೀಡಿದ್ದರು. ನಿನ್ನೆ ಮೈಸೂರಿನ ಮೆಡಿಕಲ್‌ ಕಾಲೇಜು ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹ ಹಸ್ತಾಂತರಿಸಿದ್ದೂ, ಇಂದು ಮಂಡ್ಯದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಮೈಸೂರು ತಹಶೀಲ್ದಾರ್ ಡೆತ್ ನೋಟ್ !