ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ !


20-07-2017 481

ಚಿತ್ರದುರ್ಗ: ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ, ಕೊಲೆಯಲ್ಲಿ ಅಂತ್ಯವಾಗಿದೆ. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆಯ ಅಂಬೇಡ್ಕರ್ ನಗರದ ನಾಗರಕಟ್ಟೆ ಬಳಿ ಘಟನೆ ನಡೆದಿದೆ. ರಘು( ರಾಘವೇಂದ್ರ) ಕೊಲೆಯಾದ ವ್ಯಕ್ತಿ. ಈತ ಅಟೋ ಚಾಲಕನಾಗಿದ್ದೂ, ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ನಿವಾಸಿ ಎಂದು ತಿಳಿದು ಬಂದಿದೆ. ಆಟೋ ಲೆಕ್ಕಾಚಾರದ ವೇಳೆ, ಸ್ನೇಹಿತರ ನಡುವಿನ ಜಗಳದಲ್ಲಿ, ಸ್ನೇಹಿತರಾದ ಜಾಕೀರ್ ಹುಸೇನ್ ಹಾಗೂ ಅಶೋಕ್ ಅಲಿಯಾಸ್ ಕೋತಿ , ರಾಘವೇಂದ್ರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಧನಂಜಯ್ ಹಾಗೂ ಅಶೋಕ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ಕೊಲೆ ಆರೋಪಿಗಳಾದ ಜಾಕೀರ್ ಹುಸೇನ್ ಹಾಗೂ ಅಶೋಕ್ ಅಲಿಯಾಸ್ ಕೋತಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್.ಪಿ ಪರುಶುರಾಮ್, ಚಳ್ಳಕೆರೆ ಸಿಪಿಐ ತಿಮ್ಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


ಒಂದು ಕಮೆಂಟನ್ನು ಬಿಡಿ