ಉಸಿರುಗಟ್ಟಿಸಿ ಪತ್ನಿಯ ಕೊಲೆ !


19-07-2017 1210

ಬೆಂಗಳೂರು: ನಗರದ ಹೊರವಲಯದ ಜಿಗಣಿಯಲ್ಲಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಪತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಜಿಗಣಿಯ ಎಸ್‍ಎಲ್‍ಎನ್ ರಸ್ತೆಯ ರಜನಿ (31)ಯನ್ನು ಕೊಲೆಮಾಡಿದ್ದ ಪತಿ, ಕರಿತಿಮ್ಮಯ್ಯನನ್ನು ಬಂಧಿಸಿರುವ ಜಿಗಣಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ ಕರಿತಿಮ್ಮಯ್ಯ ದಂಪತಿ ನಡುವೆ, ಆಗಾಗ ಕೌಟುಂಬಿಕ ವಿಚಾರಗಳಿಗೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಜಗಳದಿಂದ ಆಕ್ರೋಶಗೊಂಡಿದ್ದ ಕರಿತಿಮ್ಮಯ್ಯ ಮಲಗಿದ್ದ ರಜಿನಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಜಿಗಣಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ