ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರ !


18-07-2017 1404

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಮುಜುಗರದ ಸಂಗತಿ ನಡೆದಿದೆ. ನ್ಯಾಷನಲ್ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ, ಕಿರಿಯರ ವಿಭಾಗದ ನ್ಯಾಷನಲ್ ಕಬಡ್ಡಿ ಆಟಗಾರ್ತಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಜುಲೈ 9ರಂದು ಆಟಗಾರ್ತಿ ಛತ್ರಸಾಲ್ ಕ್ರೀಡಾಂಗಣಕ್ಕೆ ಹೋಗಿದ್ದೂ, ಅಲ್ಲಿ ಸಿಕ್ಕ ವ್ಯಕ್ತಿಯೊಬ್ಬ ತಾನೇ ಕೋಚ್ ಎಂದು ಪರಿಚಯಿಸಿಕೊಂಡಿದ್ದಾನೆ. 30 ವರ್ಷದ ಕೋಚ್ ಸುತ್ತಾಡಿಸುವ ನೆಪ ಹೇಳಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಆಟಗಾರ್ತಿಗೆ ಹೇಳಿದ್ದಾನಂತೆ. ಸ್ವಲ್ಪ ದೂರ ಹೋದ ನಂತ್ರ ಆಟಗಾರ್ತಿ ಕುತ್ತಿಗೆಗೆ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೆ. ಎಚ್ಚರವಾದಾಗ ಫ್ಲಾಟ್ ಒಂದರಲ್ಲಿದ್ದ ಆಟಗಾರ್ತಿಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿ, ಮರುದಿನ ರಸ್ತೆ ಬಳಿ ಬಿಟ್ಟು ಹೋಗಿದ್ದು, ವಿಷಯ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ, ಹೆದರಿಸಿರುವುದಾಗಿಯೂ ತಿಳಿದು ಬಂದಿದೆ. ಒಂದು ವಾರಗಳ ಬಳಿಕ ಆಟಗಾರ್ತಿ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.


ಒಂದು ಕಮೆಂಟನ್ನು ಬಿಡಿ