ಪಿಡಿಒ ವಿರುದ್ಧ ಪ್ರತಿಭಟನೆ !


17-07-2017 1042

ಬೆಳಗಾವಿ: ನರೇಗಾ ಯೋಜನೆಯಡಿ ತಾವು ದುಡಿದ ದುಡ್ಡುನ್ನು ಬೇರೆಯವರ ಬ್ಯಾಂಕ್ ಖಾತೆಗೆ ಜಮೆ ಮಾಡಿರುವುದಾಗಿ, ಆರೋಪಿಸಿ ಫಲಾನುಭವಿಗಳು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಉಮರಾಣಿ ಗ್ರಾಮ ಪಂಚಾಯತಿ ಮುಂದೆ ಧರಣಿ ನೆಡಸಿದ್ದಾರೆ. ಸುಮಾರು 90 ದಿನಗಳ ನರೇಗಾ ಯೋಜನೆಯಲ್ಲಿ ತಾವು ದುಡಿದ  ದುಡ್ಡು ಬೇರೆಯವರ ಖಾತೆಗೆ ಜಮೆ ಆಗಿರುವುದಾಗಿ, ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಗಳ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ. ಈ ಕೂಡಲೆ ತಮ್ಮ ಹಣ ತಮ್ಮ ಖಾತೆಗೆ ವರ್ಗಾಯಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ