ವಿಪ್ರೋ ಲೈಟಿಂಗ್ ಪುನರಾರಂಭಕ್ಕೆ ಪ್ರತಿಭಟನೆ !


17-07-2017 1190

ಮೈಸೂರು: ಬೀಗ ಮುದ್ರೆ ಹಾಕಿರುವ ಮೈಸೂರಿನ ಪ್ರತಿಷ್ಠಿತ ವಿಪ್ರೋ ಲೈಟಿಂಗ್ ಕಾರ್ಖಾನೆಯ ಪುನರಾರಂಭಕ್ಕೆ ಒತ್ತಾಯಿಸಿ, ನೌಕರರು ನಡೆಸುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಪ್ರತಿಭಟನೆ ನಡೆಸುತ್ತಿರುವ ವಿಪ್ರೋ ಲೈಟಿಂಗ್ ಕಾರ್ಖಾನೆಯ ನೌಕರರು. ವಿಪ್ರೋ ಕಾರ್ಖಾನೆ ನೌಕರರ ಪ್ರತಿಭಟನೆಗೆ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಂಘಟನೆ ಬೆಂಬಲ ನೀಡಿದೆ. ಎಐಟಿಯುಸಿ ಕಾರ್ಯಕರ್ತರು ಕೂಡ ಧರಣಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿಪ್ರೋ ಕಾರ್ಖಾನೆಯ ಪುನರಾರಂಭಕ್ಕೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸುವಂತೆ ಪ್ರತಿಭಟನಾನಿರತರು ಇದೇ ವೇಳೆ ಆಗ್ರಹಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ