ಸಿಕ್ಕಿಬಿದ್ದ ಮನೆಗಳ್ಳ !


17-07-2017 275

ಧಾರವಾಡ: ಬೀಗ ಹಾಕಿದ್ದ ಮನೆಗಳಿಗೆ ನಕಲಿ ಕೀ ಬಳಸಿ ಚಿನ್ನಾಭರಣ ಹಾಗೂ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳನನ್ನು ಧಾರವಾಡದ ಪೊಲೀಸರು ಬಂಧಿಸಿದ್ದಾರೆ. ಮಹ್ಮದ್ ಹುಸೇನ್ ಶೇಕ್ ಅಲಿಯಾಸ್ ಹನಿಸಿಂಗ್ (23) ಬಂಧಿತ ಆರೋಪಿ. ಈತ ಮೂಲತ: ಧಾರವಾಡ ರಾಮನಗರದ ನಿವಾಸಿ ಎಂದು ತಿಳಿದು ಬಂದಿದೆ. ಇನ್ನು ಕಳ್ಳತನಮಾಡಿದ್ದ 39 ಗ್ರಾಂ ಚಿನ್ನ, 9 ಬೈಕ್ ಗಳು ಮತ್ತು 9 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಆರೋಪಿಯು, ಮನೆ ಕಳ್ಳತನ ಹಾಗೂ ಬೈಕ್ ಕಳವು ಮಾಡುತ್ತಿದ್ದ. ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಧಾರವಾಡ ಉಪನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ