ಕೆಂಪಯ್ಯಗೆ ಸವಾಲೆಸೆದ ಶೋಭ ಕರಂದ್ಲಾಜೆ !


14-07-2017 1185

ಮೈಸೂರು: ಹಿಂದೂ ಮುಖಂಡರ ಕೊಲೆ ಆರೋಪಿಗಳನ್ನು ಬಂಧಿಸುವ ಶಕ್ತಿಯನ್ನು ಸಿಎಂ ಸಿದ್ದರಾಮಯ್ಯಗೆ ಕೊಡಲಿ, ಇದಕ್ಕಾಗಿ ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿದ್ದೇನೆ ಎಂದು ಸಂಸದೆ ಶೋಭ ಕರಂದ್ಲಾಜೆ ಮೈಸೂರಿನಲ್ಲಿ, ಸಿಎಂ ವಿರುದ್ಧ  ವ್ಯಂಗವಾಡಿದ್ದಾರೆ. ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಗೃಹ ಇಲಾಖೆ ಸತ್ತು ಹೋಗಿದೆ. ಈ ರಾಜ್ಯದಲ್ಲಿ ಪ್ರಮಾಣಿಕರಿಗಷ್ಟೆ ಅಲ್ಲ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಜಾರ್ಜ್ ಗೃಹ ಇಲಾಖೆಯನ್ನು ಅರ್ಧ ಸಾಯಿಸಿದ್ದರು, ಸಿಎಂ ಹಾಗೂ ಪರಮೇಶ್ವರ್ ಇನ್ನರ್ಧ ಸಾಯಿಸಿದರು ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಗೃಹ ಮಂತ್ರಿಯನ್ನು ಪೊಲೀಸ್ ಮಂತ್ರಿ ಎಂದು ಹೇಳಿ ಅವಮಾನ ಮಾಡಿದ್ದಾರೆ. ವಿಆರ್‌ಎಸ್ ತೆಗೆದುಕೊಂಡ ಕೆಂಪಯ್ಯಗೆ ದಕ್ಷಿಣ ಕನ್ನಡ ಗಲಭೆ ನಿಯಂತ್ರಿಸುವ ಅಧಿಕಾರ ನೀಡಿದ್ದಾರೆ. ಆ ಮೂಲಕ ಪೊಲೀಸ್ ವ್ಯವಸ್ಥೆ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಕೆಂಪಯ್ಯ ಅವರು, ಕಲ್ಲಡ್ಕ ಪ್ರಭಾಕರ್‌ ರನ್ನು ಅರೆಸ್ಟ್ ಮಾಡುವ ಧೈರ್ಯ ತೋರಲಿ ಅದೇನಾಗುತ್ತೋ ನಾವು ನೋಡ್ತಿವಿ ಎಂದು ಸರ್ಕಾರ ಹಾಗೂ ಕೆಂಪಯ್ಯಗೆ ಸಂಸದೆ ಶೋಭ ಕರಂದ್ಲಾಜೆ ಸವಾಲೆಸೆದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ರೈತರ ಸಂಕಷ್ಟ ದೂರಾಗಲಿ ಅಂತ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.


ಒಂದು ಕಮೆಂಟನ್ನು ಬಿಡಿ