ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ !


10-07-2017 608

ಬೆಂಗಳೂರು: ನಗರದ ಬಿಟಿಎಂ ಲೇಔಟ್ ನ  ೧ನೇ ಹಂತದಲ್ಲಿ ಸರಣಿ ಕಳ್ಳತನ ನಡೆದಿದೆ. ವಾಟರ್ ಟ್ಯಾಂಕ್ ಬಳಿ ಇರುವ ಮಧುಲೋಕ ವೈನ್ ಶಾಪ್ ನಲ್ಲಿ ಕಳ್ಳತನ ನಡೆದಿದ್ದೂ, ಶೆಟರ್ ಮೀಟಿ ಒಳ ನುಗ್ಗಿರುವ ಕಳ್ಳರು, ಲಾಕರ್ ಮುರಿದು ನಗದು ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತು ಪಕ್ಕದಲ್ಲೇ ಇರುವ ನಂದಿನಿ ಪಾರ್ಲರ್ ನಲ್ಲೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದೂ, ಪಾರ್ಲರ್ ಒಳ ನುಗ್ಗಿ ನಗದು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಸುದ್ದುಗುಂಟೆ ಪಾಳ್ಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತು ಸಿಸಿಟವಿ ದೃಶ್ಯಗಳನ್ನು ಆಧರಿಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಅಷ್ಟೇ ಅಲ್ಲದೇ  ದೊಡ್ಡಬಳ್ಳಾಪುರದಲ್ಲಿಯೂ ಸರಣಿ ಕಳ್ಳತನ ಮುಂದುವರೆದಿವೆ. ಇಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯಲಿರುವ, ಭಗತ್ ಸಿಂಗ್ ಕ್ರೀಡಾ ಮೈದಾನಕ್ಕೆ ಕೂಗಳತೆ ದೂರದಲ್ಲಿರುವ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಮೂರು ದಿನಗಳಿಂದಲೂ ಹಗಲು ರಾತ್ರಿ ಓಡಾಡುತ್ತಿರುವ ಪೊಲೀಸರ ಕಣ್ಗಾವಲಿದ್ದರೂ, ಒಂದೇ ರಾತ್ರಿ 6 ಅಂಗಡಿಗಲ್ಲಿ ಕಳ್ಳತನ ನಡೆಸಿದ್ದಾರೆ. ನಗರದ ಹೊಸಬಸ್ ನಿಲ್ದಾಣದ ಸಮೀಪ ಇರುವ ಎರಡು ತೆಂಗಿನಕಾಯಿ ಅಂಗಡಿ ,ಒಂದು ಬೈಕ್ ಮೆಕಾನಿಕ್ ಶೆಡ್, ಒಂದು ಕಾಂಡಿಮೆಂಟ್ಸ್,ಕರ್ನಾಟಕ ರಕ್ಷಣಾ ವೇದಿಕೆ ಕಚೇರಿ ಸೇರಿದಂತೆ ಅಕ್ಕಪಕ್ಕ ಇರುವ ಆರು ಅಂಗಡಿಗಳ ಶೆಟರ್ ಮೀಟಿ ಒಳ ನುಗ್ಗಿದ ಕಳ್ಳರು ಕೈಗೆ ಸಿಕ್ಕ ಚಿಲ್ಲರೆ ಕಾಸು, ವಸ್ತುಗಳನ್ನು ಕದ್ದೊಯ್ದಿದ್ದಾರೆ.


ಒಂದು ಕಮೆಂಟನ್ನು ಬಿಡಿ