ಇಷ್ಟವಿಲ್ಲದ ಮದುವೆ ಯುವತಿ ಆತ್ಮ ಹತ್ಯೆ !


07-07-2017 533

ಬೆಂಗಳೂರು: ಬ್ಯಾಟರಾಯನಪುರ ಸತ್ಯಮಣ್ಣ ಗಾರ್ಡನ್‍ ನಲ್ಲಿ ಗುರುವಾರ ರಾತ್ರಿ ಇಷ್ಟವಿಲ್ಲದ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದರಿಂದ ನೊಂದ ಯುವತಿ ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸತ್ಯಮಣ್ಣ ಗಾರ್ಡನ್‍ ನ 6ನೇ ಕ್ರಾಸ್‍ ನ ಹೀನಾಕೌಸರ್ (20)ಎಂದು ಗುರುತಿಸಲಾಗಿದೆ. ಇಷ್ಟವಿಲ್ಲದ ಯುವಕನ ಜೊತೆ ತಂದೆ ಜಿಯಾವುಲ್ಲಾ ಅವರು ವಿವಾಹ ನಿಶ್ಚಯ ಮಾಡಿ ದಿನಾಂಕವನ್ನು ನಿಗದಿಪಡಿಸಿದ್ದರು. ಎಷ್ಟು ಹೇಳಿದರೂ ತಂದೆ ಕೇಳದಿದ್ದರಿಂದ ನೊಂದ ಆಕೆ, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿರುವ ಬ್ಯಾಟರಾಯನಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ