ನಗರದಲ್ಲಿ ಸಹಕಾರ ಸೌಧ ಲೋಕಾರ್ಪಣೆ !


07-07-2017 887

ಬೆಂಗಳೂರು: ಸಹಕಾರ ಇಲಾಖೆಯು ನೂತನವಾಗಿ ನಿರ್ಮಿಸಿರುವ ಇಲಾಖಾ ಕಚೇರಿಗಳ ಸಂಕೀರ್ಣ ಕಟ್ಟಡ ಲೋಕಾರ್ಪಣೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಸಿಎಂ ಜೊತೆಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಡಾ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಬೆಂಗಳೂರಿನಲ್ಲಿದ್ದ ಸಹಕಾರ ಇಲಾಖೆಯ ೧೦ ಕಚೇರಿಗಳನ್ನ ಒಂದೇ ಸೂರಿನಡಿ ಕೆಲಸ ನಿರ್ವಹಿಸಲಿದ್ದೂ, ಮಲ್ಲೇಶ್ವರದ ಮಾರ್ಗೋಸ ರಸ್ತೆಯ ೮ ನೇ ಕ್ರಾಸ್ ನಲ್ಲಿರೋ ಸಿದ್ದನಗೌಡ ಸಂಣರಾಮನಗೌಡ ಪಾಟೀಲ ಸಹಕಾರ ಸೌಧದಲ್ಲಿ ಇನ್ನು ಮುಂದೆ ಒಂದೇ ಸೂರಿನಡಿ ಕೆಲಸ ನಿರ್ವಹಿಸಲಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇವತ್ತು ನಾವೆಲ್ಲ ಸೇರಿ ಸಹಕಾರಿ ಸೌಧದ ಲೋಕಾರ್ಪಣೆ ಮಾಡಿದ್ದೇವೆ, ಸಹಕಾರ ಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ವೇಳೆ, ಸಹಕಾರ ಸಚಿವರಾಗಿದ್ದ ಮಹದೇವ ಪ್ರಸಾದ್ ಬದುಕಿದ್ದರು, ಅವರು ಈಗಿಲ್ಲ, ಕ್ರಿಯಾಶೀಲವಾಗಿದ್ದ ವ್ಯಕ್ತಿ ಮಹದೇವ ಪ್ರಸಾದ್. ಅವರನ್ನ ನಾನು ಸ್ಮರಣೆ ಮಾಡೋದಕ್ಕೆ ಬಯಸುತ್ತೇನೆ ಎಂದರು. ಮಹದೇವ ಪ್ರಸಾದ್ ರ ಕನಸಿನ ಕೂಸು ಈ ಸಹಕಾರ ಸೌಧ, ಬೆಂಗಳುರಿನ ಪ್ರತಿಷ್ಠಿತ ಪ್ರದೇಶದಲ್ಲಿ  ನಿರ್ಮಾಣವಾದರೆ ಸಹಕಾರಿಗಳಿಗೆ ಸ್ಪೂರ್ತಿ ಆಗುತ್ತೆ ಎಂದು ಶಂಕುಸ್ಥಾಪನೆ ಮಾಡಿಸಿದ್ದರು. ಇದೀಗ ನಗರದಲ್ಲೇ ಒಂಬತ್ತು ಕೋಟಿ ಇಪ್ಪತ್ತೆರಡು ಲಕ್ಷದಲ್ಲಿ ಸಹಕಾರ ಸೌಧ ನಿರ್ಮಾಣವಾಗಿದೆ. ಇಂದಿನಿಂದ ಸಿದ್ದನಗೌಡ ಸಂಣರಾಮನ ಗೌಡ ಸಹಕಾರ ಸೌಧ ಎಂದು ನಾಮಕರಣ ಮಾಡಲಾಗಿದ್ದೂ, ಸಹಕಾರ ಕ್ಷೇತ್ರಕ್ಕೆ ೧೧೦ ವರ್ಷಗಳ ಇತಿಹಾಸ ಇದೆ ೧೯೦೫ ರಲ್ಲಿ ಸಹಕಾರ ಸಂಘ ಸ್ಥಾಪನೆ ಮಾಡಿದ್ರು. ಕರ್ನಾಟಕದ ಮೊದಲ ಸಹಕಾರ ಸಂಘ, ಸಹಕಾರ ಚಳುವಳಿಯ ಪಿತಾಮಹ ಸಿದ್ದನಗೌಡ ಪಾಟೀಲರು ಎಂದರು. ೧೧ ಸಾವಿರ ಕೋಟಿ ಸಾಲ ರೈತರಿಗೆ ವಿತರಣೆ ಮಾಡಿದ್ದೇವೆ. ಸೊಸೈಟಿಗಳ ಮೂಲಕ ೨೪ ಲಕ್ಷ ಜನರಿಗೆ ಸಾಲ ವಿತರಣೆಯಾಗಿದೆ. ೫೦ ಸಾವಿರ ವರೆಗೆ ಸಾಲ ಮನ್ನ ಮಾಡಿದ್ದೇವೆ, ಮೂರು ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಪ್ರತಿದಿನ ೩.೭೦ ಲಕ್ಷ ಕೋಟಿ ಕೋಟಿ ಸಬ್ಸಿಡಿ ಹೋಗ್ತಿದೆ ಒಟ್ಟಾರೆ ಸುಮಾರು ೪೧ ಸಾವಿರ ಸಹಕಾರ ಸಂಘಗಳಿವೆ, ೨.೫ ಕೋಟಿ ಸದಸ್ಯರಿದ್ದಾರೆ, ಕರ್ನಾಟಕದ ಜನಸಂಖ್ಯೆ ೬.೫ ಕೋಟಿಯಲ್ಲಿ ಬಹುತೇಕರು ಸಹಕಾರ ಸಂಘದ ಸದಸ್ಯರಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಸಹಕಾರ ಸಂಘ ಇಲ್ಲದ ಕ್ಷೇತ್ರವಿಲ್ಲ, ಎಂದ ಸಿಎಂ ಯಾವುದೇ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರ ಮುಖ್ಯ, ಸಹಕಾರಿಗಳಲ್ಲಿ ಯಾವತ್ತೂ ಒಗ್ಗಟ್ಟು ಇರುತ್ತೆ ಯಾವುದೇ ಪಾರ್ಟಿ ಇರಲಿ ಬಹಳ ಜನ ರಾಜಕಾರಣಿಗಳು ಸಹಕಾರ ಕ್ಷೇತ್ರದಿಂದ ಬಂದಿರೋದು ಹೆಚ್ಚು, ನಾನು ಸಹಕಾರ ಕ್ಷೇತ್ರದ ಹಿನ್ನೆಲೆಯಿಂದ ಬಂದಿಲ್ಲ ಎಂದರು. ಒಂದು ಗ್ರಾಮದ ಅಭಿವೃದ್ಧಿ ಆಗಬೇಕಾದರೆ ಒಂದು ಗ್ರಾಮ ಪಂಚಾಯಿತಿ ಇರಬೇಕು, ಶಾಲೆ ಹಾಗೂ ಸಹಕಾರ ಸಂಘ ಇರಬೇಕು ಆಗ ಮಾತ್ರ ಗ್ರಾಮದ ಆರ್ಥಿಕ ಬೆಳವಣಿಗೆ ಆಗಲು ಸಾಧ್ಯ ಎಂದರು.


ಒಂದು ಕಮೆಂಟನ್ನು ಬಿಡಿ