ಬಿ.ಎಸ್.ವೈ ಮೊದಲು ಸಂಸ್ಕಾರ ಕಲಿಯಲಿ !


03-07-2017 424

ಹಾಸನ: ಮಂಡ್ಯದ ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರತಿಭಟನೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಹಾಸನದಲ್ಲಿಂದು ಮಾತನಾಡಿದ ಸಿಎಂ, ಸುಪ್ರಿಂ ಕೋರ್ಟ್ ಆದೇಶ ಪಾಲನೆ ಹಿನ್ನೆಲೆಯಲ್ಲಿ ನೀರು ಬಿಡಲಾಗುತ್ತಿದೆ, ಎಲ್ಲಾ ನೀರನ್ನು ಬಿಡುತ್ತಿಲ್ಲ, ನೀರು ಹಂಚಿಕೆ‌ ವಿಷಯದಲ್ಲಿ ತಮಿಳುನಾಡು ಯಾವಾಗಲೂ ಸತ್ಯ ಹೇಳಲ್ಲ, ನಾವು ನೀರು ಬಿಡದೆ ಹೋದರೆ ಅವರು ಮತ್ತೆ ಸುಪ್ರೀಂ ಕೋರ್ಟ್ ಗೆ ಹೋಗುತ್ತಾರೆ, ನಮಗೆ ತೊಂದರೆ ಮಾಡಿಕೊಂಡು ಅವರಿಗೆ ನೀರು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇನ್ನು 2018 ರ ಚುನಾವಣೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಮುಂದಿನ‌ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ, ಹಿಂದಿನಿಂದಲೂ ನಾನು ಇದನ್ನೇ ಹೇಳುತ್ತಿದ್ದೇನೆ ಎಂದರು, ಮಳೆ ಅಭಾವ ಹಿನ್ನೆಲೆ ಕೆಲ ದಿನ ನೋಡಿಕೊಂಡು ಮೋಡಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದೂ ತಿಳಿಸಿದರು. ಯಡಿಯೂರಪ್ಪ ಬಗ್ಗೆ ಗರಂ ಆದ ಸಿಎಂ, ಮೊದಲು ಬಿ.ಎಸ್. ವೈ ಸಂಸ್ಕಾರ ಕಲಿಯಲು ಹೇಳಿ ಎಂದು ಟಾಂಗ್ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ