ಕುತೂಹಲ ಮೂಡಿಸಿರುವ ಇಸ್ರೇಲ್ ಭೇಟಿ !


03-07-2017 1282

ಜರುಸಲೇಂ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಇಸ್ರೇಲ್ ದೇಶಕ್ಕೆ 3 ದಿನಗಳ ಪ್ರವಾಸ ಕೈ ಗೊಂಡಿದ್ದಾರೆ, ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿರುವ ಇಸ್ರೇಲ್ ದೇಶ, ತನ್ನ ಪತ್ರಿಕೆಗಳಲ್ಲಿ, ಅತೀದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಗಳು ಬರುತ್ತಿದ್ದಾರೆ ಎಲ್ಲರೂ ಎದ್ದು ನಿಲ್ಲಿ, ಎಂಬ ವಾಕ್ಯಗಳ ಮೂಲಕ ಭಾರತ-ಇಸ್ರೇಲ್ ದೇಶದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಸಿತ್ತು, ನಾಳೆ ಪ್ರಧಾನಿ ಮೋದಿ ಅವರು, ಇಸ್ರೇಲ್ ದೇಶಕ್ಕೆ ಭೇಟಿ ನೀಡಲಿದ್ದು, ಇಸ್ರೇಲ್ ದೇಶದ ಪ್ರಧಾನಿಯೊಂದಿಗೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತ ಮತ್ತು ಇಸ್ರೇಲ್ ದೇಶದ ನಡುವಣ 25 ವರ್ಷಗಳ ಸುಧೀರ್ಘ ಸಂಬಂಧಕ್ಕೆ, ನರೇಂದ್ರ ಮೋದಿ ಅವರ ಭೇಟಿ ಸಾಕ್ಷಿಯಾಗಲಿದೆ ಎಂದಿದ್ದಾರೆ. ಮತ್ತು ಈ ಭೇಟಿಯಲ್ಲಿ ಪ್ರಮುಖವಾಗಿ, ಸೈಬರ್ ಸೆಕ್ಯೂರಿಟಿ ಮತ್ತು ಆಧುನಿಕ ಸುಧಾರಿತ ತಂತ್ರಜ್ಞಾನದ ಬಗ್ಗೆ ಮಾತುಕತೆ ನಡೆಯಲಿದೆ ಎಂದಿದ್ದಾರೆ. ಮತ್ತು ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದ ಪ್ರಮುಖ ನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ.     


ಒಂದು ಕಮೆಂಟನ್ನು ಬಿಡಿ