ಪೊಲೀಸ್ ಅಧಿಕಾರಿಯನ್ನೇ ಕತ್ತು ಸೀಳಿ ಹತ್ಯೆ !


01-07-2017 354

ಲಖನೌ: ಪೊಲೀಸ್ ಅಧಿಕಾರಿಯೊಬ್ಬರ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. ಸೆರ್ಹೋಜ್ ಸಿಂಗ್ ಹತ್ಯೆಯಾದ ಪೊಲೀಸ್ ಅಧಿಕಾರಿ ಎಂದು ಗುರ್ತಿಸಲಾಗಿದೆ. ಸಹ್ರೋಜ್ ಅವರು ಉತ್ತರಪ್ರದೇಶದ ಮಂದವಾರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹತ್ಯೆಯಾದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿ.ಎಂ.ಜಗತ್ರಾಜ್ ಮತ್ತು ಎಸ್.ಪಿ ಅತುಲ್ ಶರ್ಮಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನಡು ರಸ್ತೆಯಲ್ಲಿ ಸಹ್ರೋಜ್ ಅವರ ಮೃತದೇಹ ದೊರಕಿದ್ದು, ದೇಹದ ಮೇಲೆ ಹಲವಾರು ಗಾಯಗಳಿರುವುದು ಕಂಡುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 


ಒಂದು ಕಮೆಂಟನ್ನು ಬಿಡಿ