ಟ್ರಂಪ್ ಪತ್ನಿಗೆ ಪ್ರಧಾನಿ ಮೋದಿಯಿಂದ ಉಡುಗೊರೆ !


27-06-2017 370

ನವೆದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡೊಲಾನ್ಡ್ ಟ್ರಂಪ್ ಪತ್ನಿ ಮೆಲಾನಿಯಾರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.ಹೌದು, ಮೋದಿ ಮೆಲಾನಿಯಾರಿಗೆ ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಕೈಯಿಂದ ತಯಾರಾಗುವ ಶಾಲ್ ಹಾಗೂ ಸಿಲ್ವರ್ ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದ್ದಾರೆ. ಟೀ ಎಲೆ ಹಾಗೂ ಜೇನು ತುಪ್ಪವನ್ನೂ ಮೋದಿ ಮೆಲಾನಿಯಾರಿಗೆ ನೀಡಿದ್ದಾರೆ. ಡೊಲಾನ್ಡ್ ಟ್ರಂಪ್, ಮೆಲಾನಿಯಾ ಹಾಗೂ ಮಕ್ಕಳಿಗೆ ಭಾರತಕ್ಕೆ ಬರುವಂತೆ ಮೋದಿ ಆಹ್ವಾನ ನೀಡಿದ್ದಾರೆ. ಶೀಘ್ರದಲ್ಲಿಯೇ ಟ್ರಂಪ್ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಡೊನಾಲ್ಡ್ ಟ್ರಂಪ್ ಮೋದಿಯವರಿಗೆ ಶ್ವೇತಭವನವನ್ನು ತೋರಿಸಿದ್ದಾರೆ. ಅಮೆರಿಕಾ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ರೂಮ್ ಸೇರಿದಂತೆ ಪ್ರತಿಯೊಂದು ಕೋಣೆಯ ಪರಿಚಯ ಮಾಡಿಸಿದ್ದಾರೆ. ಒಟ್ಟಾರೆ ಭಾರತ ಹಾಗೂ ಅಮೇರಿಕದ ನಡುವೆ ಸಂಬಂಧಗಳು ಹೆಚ್ಚು ಗಟ್ಟಿಯಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಇದಕ್ಕೆ ಇನ್ನಷ್ಟು ಮೆರಗು ನೀಡಿದೆ.

 


ಒಂದು ಕಮೆಂಟನ್ನು ಬಿಡಿ