ಇಸ್ರೋ: ಮತ್ತೊಂದು ಉಪಗ್ರಹ ಉಡಾವಣೆಗೆ ಸಿದ್ಧ !


27-06-2017 628

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ  ಹಾಗೂ ಫ್ರಾನ್ಸ್ ನ ಸಹಭಾಗಿತ್ವದಲ್ಲಿ, ದೂರಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿದ ಜಿ–ಸ್ಯಾಟ್‌–17 ಉಪಗ್ರಹವನ್ನು ನಾಳೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. ಫ್ರೆಂಚ್ ಗಯಾನ ಬಾಹ್ಯಾಕಾಶ ನೆಲೆಯಿಂದ ಉಡಾವಣೆ ನಡೆಸಲು ಸಿದ್ಧತೆ ನಡೆಸಿದೆ. ಈ ಉಪಗ್ರಹದ ಉಡಾವಣೆಗೆ ಗಯಾನ ಬಾಹ್ಯಾಕಾಶ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಏರಿಯನ್‌ ರಾಕೆಟ್‌ ಮೂಲಕ ಉಡಾವಣೆ ಮಾಡಲಾಗುತ್ತಿದೆ. ಈ ಉಪಗ್ರಹದ ತೂಕವು 3,425 ಕೆ.ಜಿ ಇದ್ದು, 400 ಟ್ರಾನ್ಸ್ ಫಾಂಡರ್ ಗಳನ್ನ ಇದರಲ್ಲಿ ಜೋಡಿಸಲಾಗಿದೆ. ಈ ಉಪಗ್ರಹ ವಿನ್ಯಾಸ, ಜೋಡಣೆ ಹಾಗೂ ಇನ್ನಿತರ ಕೆಲಸಗಳನ್ನು ಇಸ್ರೊ ಪೂರ್ಣಗೊಳಿಸಿದೆ. ಈಗ ಕಾರ್ಯ ನಿರ್ವಹಿಸುತ್ತಿರುವ ಬಹುತರಂಗಾಂತರ “ಸಿ” ಮತ್ತು “ಕೆ” ಬದಲಾಗಿ ಈ ಉಪಗ್ರಹ ಕಾರ್ಯ ನಿರ್ವಹಿಸಲಿವೆ. ಜಿ–ಸ್ಯಾಟ್‌ –17 ಉಡಾವಣೆ ಒಪ್ಪಂದದಿಂದಾಗಿ ಏರಿಯಾನ್‌ ಸ್ಪೇಸ್‌ ಹಾಗೂ ಇಸ್ರೊದ ಮಧ್ಯೆ 34 ವರ್ಷಗಳ ಸುದೀರ್ಘ ಬಾಂಧವ್ಯ ಹೊಸ ಆಯಾಮ ಪಡೆದುಕೊಂಡಿದೆ.


ಒಂದು ಕಮೆಂಟನ್ನು ಬಿಡಿ