ಟ್ರಂಪ್ ಸುಲಭ್ ವಿಲೇಜ್ !


26-06-2017 611

ಹರಿಯಾಣ : ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮತ್ತು ಡೊನಾಲ್ಡ್ ಟ್ರಂಪ್ ಅಮೇರಿಕದ ಅದ್ಯಕ್ಷರಾದ ಬಳಿಕ ಮೊದಲನೇ  ಬಾರಿಗೆ ಭೇಟಿಯಾದ ಹಿನ್ನೆಲೆಯಲ್ಲಿ ಹರಿಯಾಣದ ಮರೋರ ಹಳ್ಳಿಯ ಜನರಿಗೆ ಆಶ್ಚರ್ಯವೊಂದು ಕಾದಿತ್ತು, ಗ್ರಾಮದ ಮುಂಭಾಗದಲ್ಲಿ ಅಮೇರಿಕದ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಅವರ ದೊಡ್ಡ ಭಾವ ಚಿತ್ರ ಹಳ್ಳಿಗರಿಗೆ ಆಶ್ಚರ್ಯ ತಂದಿತ್ತು, ಇದಕ್ಕೆ ಕಾರಣವೆಂದರೆ ಭಾರತದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಗುತ್ತಿಗೆ ಪಡೆದಿರುವ ಸುಲಭ್  ಇಂಟರ್ ನ್ಯಾಷನಲ್, ಹರಿಯಾಣದ ಮೂರು ಗ್ರಾಮಗಳನ್ನು ಟ್ರಂಪ್ ಸುಲಭ ವಿಲೇಜ್ ಎಂದು ಕರೆದಿದ್ದಾರೆ. ಗ್ರಾಮದಲ್ಲಿ 180 ಕುಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಮೊದಲ ಭೇಟಿಯ ನಿಮಿತ್ತ ಈ ರೀತಿಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಮತ್ತು ಹಳ್ಳಿಯ ಹೆಸರನ್ನು ನಾವು ಬದಲಾಯಿಸುವುದಿಲ್ಲ, ಹಳ್ಳಿಯ ಹೆಸರೊಂದಿಗೆ ಈ ಸುಲಭ ವಿಲೇಜ್ ಎಂಬ ಬೋರ್ಡನ್ನು ಹಾಕಲಾಗಿದೆ ಅಷ್ಟೆ, ಇದು ಕೇವಲ ಸಂಬಂಧ ವೃದ್ಧಿಗೆ ಮಾತ್ರ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ. ಒಟ್ಟಾರೆ ಡೊನಾಲ್ಡ್ ಟ್ರಂಪ್ ಅವರ ಹೆಸರಿನಲ್ಲಿ ಫಲಕ ಮತ್ತು ಬೋರ್ಡ್ ಗಳು  ಹಳ್ಳಿಗರನ್ನು ಆಶ್ಚರ್ಯಗೊಳಿಸಿದ್ದಂತೂ ನಿಜ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಹರಿಯಾಣ ಟ್ರಂಪ್ ಸುಲಭ್ ವಿಲೇಜ್ !