ಸುವರ್ಣಕ್ಕೊಂದು ಕಿವಿಮಾತು !


22-06-2017 646

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರು ಹಿಂದಿನಿಂದಲೂ ಪುರೋಹಿತಶಾಹಿಗಳ ವಿರುದ್ಧ, ವೈದಿಕ ಆಚರಣೆಗಳ ವಿರುದ್ಧ ಮಾತನಾಡುತ್ತಾ ಬಂದಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರ ಸ್ಪಷ್ಟವಾದ ನಿಲುವನ್ನು ಹೊಂದಿರುವ ಮತ್ತು ಆ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಶ್ರಮಿಸುತ್ತಿರುವ ಚಿಂತಕರಲ್ಲಿ ದ್ವಾರಕಾನಾಥ್ ಕೂಡ ಒಬ್ಬರು. ಹಲವಾರು ಸುದ್ದಿ ಪತ್ರಿಕೆಗಳಿಗೆ ಲೇಖನ, ಅಂಕಣ ಬರೆಯುವ ಮೂಲಕ ಮತ್ತು ಸುದ್ದಿವಾಹಿನಿಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದ್ವಾರಕಾನಾಥ್ ಅವರು, ತಮ್ಮ ಅಭಿಪ್ರಾಯವನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಮಂಡಿಸುತ್ತಾರೆ. ಇತ್ತೀಚೆಗೆ, ಅವರು ಕೆಲವು ಸುದ್ದಿವಾಹಿನಿಗಳ ಆಹ್ವಾನವನ್ನು ಒಪ್ಪಿಕೊಳ್ಳುತ್ತಿಲ್ಲವೆಂದು ಹೇಳಲಾಗಿದೆ. ಅದರಲ್ಲೂ ಸುವರ್ಣ ನ್ಯೂಸ್‌ ನವರು ಪದೇ ಪದೇ ದ್ವಾರಕಾನಾಥ್ ಅವರನ್ನು ಆಹ್ವಾನಿಸಿದರೂ ಅಲ್ಲಿಗೆ ಹೋಗುತ್ತಿಲ್ಲವಂತೆ. ಹೀಗೇಕೆ ಎಂದು ಸುವರ್ಣ ನ್ಯೂಸ್‌ನವರು ಕೇಳಿದಾಗ, ‘ನೀವು ಸುವರ್ಣ ನ್ಯೂಸ್ ಅನ್ನು ಆರೆಸ್ಸೆಸ್ ಕಚೇರಿಗೆ ಸ್ಥಳಾಂತರಿಸಿಬಿಡಿ, ಅದೇ ಸೂಕ್ತ, ನೀವೇಕೆ ಅನಗತ್ಯವಾಗಿ ಬೇರೆ ಕಚೇರಿ ಮಾಡಿಕೊಂಡಿರಬೇಕು’ ಅನ್ನುವುದು ದ್ವಾರಕಾನಾಥ್ ಅವರ ಪ್ರತಿಕ್ರಿಯೆ ಆಗಿತ್ತಂತೆ. ಡಾ.ಸಿ.ಎಸ್ .ದ್ವಾರಕಾನಾಥ್ ಅವರ ಈ ಮಾತಿನ ಬಗ್ಗೆ ತಲೆ ಕೆಡಿಸಿಕೊಂಡಿರುವ ಸುವರ್ಣ ಚಾನಲ್‌ನವರು ಆ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರಂತೆ.