ಕಾರಿಗೆ ಲಾರಿ ಡಿಕ್ಕಿ ಓರ್ವ ಸಾವು !


22-06-2017 307

ಕೋಲಾರ: ವೇಗವಾಗ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಕೋಲಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬೆಳ್ಳೂರು ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿದ್ದ 25 ವರ್ಷದ ಅಪರಿಚಿತ ಯುವಕ ಸಾವನ್ನಪ್ಪಿದ್ದಾನೆ.  K.A.02 AB 3325 ಕಾರು ಸಂಖ್ಯೆ. ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.                     


ಒಂದು ಕಮೆಂಟನ್ನು ಬಿಡಿ