ಕ್ರೀಮಿನಾಶಕ ಸೇವಿಸಿ ರೈತ ಆತ್ಮ ಹತ್ಯೆ !


21-06-2017 446

ಮೈಸೂರು: ಬೆಳೆ ನಷ್ಟ ಮತ್ತು ಸಾಲ ಬಾಧೆಯಿಂದ ತತ್ತರಿಸಿದ ರೈತ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಹರಂಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹರಂಬಳ್ಳಿ ಗ್ರಾಮದ ಚಂದ್ರೇಗೌಡ (46) ಮೃತ ರೈತ. ಹೊಸ ಅಗ್ರಹಾರದ ವ್ಯವಸಾಯ ಸಹಕಾರ ಸಂಘದಲ್ಲಿ 97 ಸಾವಿರ ರೂಪಾಯಿ ಸಾಲ ಹಾಗೂ ಮೂರು ಲಕ್ಷ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದರು. ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಆದರೆ ಕಬ್ಬು ಬೆಳೆಗೆ ನೀರಿಲ್ಲದೆ ಒಣಗಿತ್ತು. ಇದರಿಂದ ಕಂಗಾಲಾಗಿದ್ದ ರೈತ ತನ್ನದೇ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ